2 ಸ್ಥಳೀಯ ಚಾನೆಲ್ ಗಳಿಗೆ ನಿರ್ಬಂಧ ಹಾಕಿದ ಕೇರಳ ರಾಜ್ಯಪಾಲ

Prasthutha|

ಕೊಚ್ಚಿ: ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸೋಮವಾರ ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಸಮಯದಲ್ಲಿ ಎರಡು ಮಲಯಾಳಂ ಚಾನೆಲ್ ಗಳಿಗೆ ನಿರ್ಬಂಧ ಹೇರಿದ್ದಾರೆ.

- Advertisement -

ಎರಡು ಮಲಯಾಳಂ ಸುದ್ದಿ ವಾಹಿನಿಗಳ ಪತ್ರಕರ್ತರು ನಿರ್ಗಮಿಸುವವರೆಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ನಿರಾಕರಿಸಿದರು.
ಮಾಧ್ಯಮದ ಸೋಗಿನಲ್ಲಿ ರಾಜಕೀಯ ಮಾಡುತ್ತಿರುವುದಲ್ಲದೆ ನನ್ನ ವಿರುದ್ಧ ಅಪ ಪ್ರಚಾರವನ್ನು ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ. ಕೈರಳಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್ ಗಳ ವರದಿಗಾರರನ್ನು ಸ್ಥಳದಿಂದ ಹೊರಹೋಗುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ.

ನಾನು ಮಾಧ್ಯಮಗಳನ್ನು ಬಹಳ ಮುಖ್ಯವೆಂದು ಪರಿಗಣಿಸಿದ್ದೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದೇನೆ. ಆದರೆ ಮಾಧ್ಯಮಗಳ ಸೋಗಿನಲ್ಲಿ ಇರುವವರಿಗೆ ನನ್ನನ್ನು ನಾನು ಒಪ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

- Advertisement -

ಖಾನ್ ಪ್ರಸ್ತುತ ರಾಜ್ಯದ ಪಿಣರಾಯಿ ವಿಜಯನ್ ಸರ್ಕಾರದೊಂದಿಗೆ ಉಪಕುಲಪತಿಗಳ ನೇಮಕದಿಂದ ಹಿಡಿದು ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಮಾಧ್ಯಮಗಳನ್ನು ನಿರ್ಬಂಧಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್, ರಾಜ್ಯಪಾಲರ ನಿರಂಕುಶ ಕ್ರಮದ ವಿರುದ್ಧ ಮಂಗಳವಾರ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದೆ.



Join Whatsapp