ಕೇರಳ: ಇನ್ಮುಂದೆ ಬೈಕ್ ಸವಾರರು ಕ್ಯಾಮರಾ ಹೊಂದಿರುವ ಹೆಲ್ಮೆಟ್ ಧರಿಸುವಂತಿಲ್ಲ

Prasthutha|

ಆದೇಶ ಹೊರಡಿಸಿದ ಮೋಟಾರು ವಾಹನ ಇಲಾಖೆ

- Advertisement -

ತಿರುವನಂತಪುರಂ: ಹೆಲ್ಮೆಟ್ನಲ್ಲಿ ಕ್ಯಾಮರಾ ಅಳವಡಿಸಿ ಬೈಕ್ ಚಲಾಯಿಸುವುದಕ್ಕೆ ಕೇರಳ ಮೋಟಾರು ವಾಹನ ಇಲಾಖೆ (MVD) ನಿಷೇಧ ವಿಧಿಸಿ ಆದೇಶಿಸಿದ್ದು, ನಿಯಮ ಉಲ್ಲಂಘನೆಯಾದಲ್ಲಿ ಒಂದು ಸಾವಿರ ರೂ. ದಂಡ ವಿಧಿಸುವುದಲ್ಲದೆ, ಮೂರು ತಿಂಗಳವರೆಗೆ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಕ್ಯಾಮರಾ ಇರುವ ಹೆಲ್ಮೆಟ್ ಧರಿಸಿದವರಿಗೆ ಮುಖದಲ್ಲಿ ಹೆಚ್ಚಿನ ಗಾಯಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

ಕ್ಯಾಮರಾ ಹೊಂದಿರುವ ಹೆಲ್ಮೆಟ್ ಅಪಘಾತಕ್ಕೀಡಾದ ಸಂದರ್ಭದಲ್ಲಿ ಧರಿಸಿದವರ ಮುಖದ ಮೇಲೆ ಗಂಭೀರ ಗಾಯಗಳಿಗೆ ಕಾರಣವಾಗಿದೆ ಎಂಬ ಅಂಶ ಇತ್ತೀಚಿಗೆ ಬೆಳಕಿಗೆ ಬಂದಿತ್ತು.

ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಮತ್ತು ವ್ಲೋಗರ್ ಗಳು ಈ ರೀತಿ ಕ್ಯಾಮರಾ ಹೊಂದಿರುವ ಹೆಲ್ಮೆಟ್ ಧರಿಸುವುದು ರಾಜ್ಯದಲ್ಲಿ ಹೆಚ್ಚಾಗಿ ಕಂಡು ಬಂದಿತ್ತು.

Join Whatsapp