ಚಿತ್ರದುರ್ಗ | ಟೊಮೊಟೊ ಬೆಲೆಯಲ್ಲಿ ದಿಢೀರ್ ಕುಸಿತ; ರಸ್ತೆಗೆ ಸುರಿದ ರೈತಾಪಿವರ್ಗ

Prasthutha|

ಚಿತ್ರದುರ್ಗ: ಮೇ ತಿಂಗಳಲ್ಲಿ ಕೆಜಿಯೊಂದಕ್ಕೆ 100 ರೂ.ಗೆ ಮಾರಾಟವಾಗುತ್ತಿದ್ದ ಟೊಮೊಟೊ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, 15 ಕೆಜಿಯ ಬಾಕ್ಸ್’ವೊಂದಕ್ಕೆ 10 ರೂ.ಕೊಟ್ಟು ಖರೀದಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕುಪಿತಗೊಂಡ ಚಿತ್ರದುರ್ಗ ಜಿಲ್ಲೆಯ ಚಳ್ಳಕೆಗೆ ಸಮೀಪದ ಚಿಕ್ಕಮ್ಮನಹಳ್ಳಿಯ ರೈತಾಪಿವರ್ಗವು ಟೊಮೊಟೊಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

- Advertisement -

ಅಲ್ಲದೆ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ತಮ್ಮ ಬೆಳೆಗಳನ್ನು ಸುರಿದು ಅವುಗಳ ಮೇಲೆ ಟ್ರಾಕ್ಟರ್ ಹರಿಸಿದ್ದಾರೆ.

ಈ ಹಿಂದೆ ಟೊಮೊಟೊ ದಾಖಲೆಯ ಬೆಲೆಗೆ ಮಾರಾಟವಾದ ಕಾರಣ ಸಂತುಷ್ಟಗೊಂಡಿದ್ದ ಆಸುಪಾಸಿನ ಹಳ್ಳಿಗಳ ಅಧಿಕ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೊಟೊವನ್ನು ಬಿತ್ತನೆ ಮಾಡಿದ್ದರು. ಈ ಮಧ್ಯೆ ಮಾರುಕಟ್ಟೆಗೆ ಉತ್ತಮ ಬೆಳೆಗಳು ಬಂದ ಹಿನ್ನೆಲೆಯಲ್ಲಿ ಅವುಗಳ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.

Join Whatsapp