ಕೇರಳ| ಉಚಿತ ಬಿರಿಯಾನಿ ಹಂಚಿ ಅರ್ಜೆಂಟಿನಾ ಅಭಿಮಾನಿಯಿಂದ ಸಂಭ್ರಮಾಚರಣೆ

Prasthutha|

ಅರ್ಜೆಂಟಿನಾ ಮೂರನೇ ಬಾರಿ ಫಿಫಾ ವಿಶ್ವಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಭಾರತದಲ್ಲೂ ಹಲೆವೆಡೆಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಯಲ್ಲಿ ಭಾಗಿಯಾಗಿದ್ದಾರೆ.

- Advertisement -

ಇದೀಗ ಕೇರಳದ ಹೊಟೇಲೊಂದರ ಮಾಲೀಕ, ಅರ್ಜೆಂಟಿನಾದ ಮೇಲಿನ ತನ್ನ ಅಭಿಮಾನವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ.

ತ್ರಿಶೂರ್ ಜಿಲ್ಲೆಯ ಪಳ್ಳಿಮೂಲಾ ಎಂಬಲ್ಲಿರುವ ರಾಕ್‌ಲ್ಯಾಂಡ್ ಹೊಟೇಲ್ ಮಾಲಕ ಶಿಬು ಅವರು ವಿಶ್ವಕಪ್‌ ಆರಂಭವಾಗುವ ಮೊದಲೇ ಅರ್ಜೆಂಟಿನಾ ಚಾಂಪಿಯನ್‌ ಆದರೆ ಒಂದು ಸಾವಿರ ಮಂದಿಗೆ ಉಚಿತವಾಗಿ ಬಿರಿಯಾನಿ ವಿತರಿಸುವುದಾಗಿ ಭರವಸೆ ನೀಡಿದ್ದರು.  ಮೆಸ್ಸಿ ಪಡೆ ವಿಶ್ವಕಿರೀಟಕ್ಕೆ ಮುತ್ತಿಟ್ಟ ಬೆನ್ನಲ್ಲೇ ಕೊಟ್ಟ ಮಾತು ಉಳಿಸಿಕೊಂಡಿರುವ ಶಿಬು, ಸೋಮವಾರ ಬೆಳಗ್ಗೆ 11 ಗಂಟೆಯಿಂದ ಬಿರಿಯಾನಿ ವಿತರಣೆ ಆರಂಭಿಸಿದ್ದರು.

- Advertisement -

ಶಿಬು ಅವರ ಸಂದರ್ಶನ ಭಾನುವಾರ ರಾತ್ರಿಯೇ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾದ ಕಾರಣ, ಮರುದಿನ ರಾಕ್‌ಲ್ಯಾಂಡ್ ಹೊಟೇಲ್ ಬಳಿ, ನಿರೀಕ್ಷೇಗೂ ಮೀರಿ ಜನಸಮೂಹ ಸೇರಿತ್ತು. ನೀಡಿದ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತೀರ್ಮಾನಿಸಿದ್ದ ಶಿಬು , ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನರ ಉದ್ದನೆಯ ಸರತಿ ಸಾಲಿನಲ್ಲಿದ್ದವರೆಲ್ಲರಿಗೂ ಬಿರಿಯಾನಿ ಹಂಚಿದ್ದಾರೆ. ಕೊಟ್ಟ ಭರವಸೆಗಿಂತ 500ಕ್ಕೂ ಹೆಚ್ಚು ಮಂದಿಗೆಬಿರಿಯಾನಿ ವಿತರಿಸಲಾಗಿದೆ ಎಂದು ಶಿಬು ಹೇಳಿದ್ದಾರೆ.

Join Whatsapp