ಸಿದ್ದೀಕ್ ಕಾಪ್ಪನ್ ಅಕ್ರಮ ಬಂಧನ ಕಾನೂನು ದುರುಪಯೋಗಕ್ಕೆ ಉತ್ತಮ ಉದಾಹರಣೆ: ಕೇರಳ ಮಾಜಿ ಡಿಜಿಪಿ

Prasthutha|

ಕಲ್ಲಿಕೋಟೆ: ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಅನ್ಯಾಯವಾಗಿ ಬಂಧಿಸಿರುವುದು ಕಾನೂನಿನ ದುರುಪಯೋಗಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕೇರಳ ವಿಜಿಲೆನ್ಸ್ ಮಾಜಿ ಡಿಜಿಪಿ ಐಪಿಎಸ್ ಅಧಿಕಾರಿ ಎನ್ ಸಿ ಆಸ್ಥಾನ ಹೇಳಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿದ ಅವರು, ‘ಹೌದು. ಸಾಮ್ರಾಜ್ಯಶಾಹಿ ಆಡಳಿತವು ಕೆಲವರನ್ನು ಹಿಂಸಿಸಲು ಮತ್ತು ನಮ್ಮ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲು ಇದನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಸಿದ್ದೀಕ್ ಕಾಪ್ಪನ್ ಅವರ ಅಕ್ರಮ ಬಂಧನದ ಬಗ್ಗೆ ಪತ್ರಕರ್ತೆ ಆರಿಫಾ ಖಾನಮ್ ಶೆರ್ವಾನಿ ಅವರ ಟ್ವೀಟ್ ಅನ್ನು ಹಂಚಿಕೊಳ್ಳುವ ಮೂಲಕ ಫ್ಯಾಸಿಸ್ಟ್ ಆಡಳಿತದ ಕ್ರಮಗಳನ್ನು ಎನ್ ಸಿ ಆಸ್ತಾನ ಟೀಕಿಸಿದರು.

- Advertisement -
https://twitter.com/NcAsthana/status/1445385616439533575

“ಸಿದ್ದೀಕ್ ಕಾಪ್ಪನ್ ಬಗ್ಗೆ ಯೋಚಿಸಿದಾಗಲೆಲ್ಲಾ ನಾನು ಒಬ್ಬ ಭಾರತೀಯಳಾಗಿ ಮತ್ತು ಒಬ್ಬ ಪತ್ರಕರ್ತೆಯಾಗಿ ನಾಚಿಕೆಪಡುತ್ತೇನೆ. ದೇಶದ್ರೋಹ ಪ್ರಕರಣದ ಜೈಲುವಾಸಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಕರಾಳ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಪತ್ರಕರ್ತನಾಗಿ ಮತ್ತು ಒಬ್ಬ ಮುಸ್ಲಿಮನಾಗಿ ಪ್ರಾಮಾಣಿಕ ಸೇವೆಗೆ ಅವರು ಬೆಲೆ ತೆರಬೇಕಾಯಿತು” ಎಂದು ಖಾನಮ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Join Whatsapp