‘ಇಸ್ರೇಲ್ ದಾಳಿಯಿಂದ 70 ಕ್ಕೂ ಹೆಚ್ಚು ಫೆಲೆಸ್ತೀನಿಯರಿಗೆ ಗಂಭೀರ ಗಾಯ’: ರೆಡ್ ಕ್ರೆಸೆಂಟ್ ಸೊಸೈಟಿ

Prasthutha|

ಟೆಲ್ ಅವೀವ್: ಇಸ್ರೇಲ್ ಸೈನಿಕರು ಪಶ್ಚಿಮ ದಂಡೆಯ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 70 ಮಂದಿ ಫೆಲೆಸ್ತೀನ್ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿದೆ.

- Advertisement -

ನಬ್ಲಸ್ ನಗರದ ದಕ್ಷಿಣದಲ್ಲಿ ಈ ಘಟನೆ ನಡೆದಿದ್ದು, ಇಸ್ರೇಲ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿ ಯಹೂದಿ ವಸಾಹತು ಕಾಲನಿಗಳನ್ನು ನಿರ್ಮಿಸುತ್ತಿದೆ ಎಂದು ಫೆಲೆಸ್ತೀನ್ ಜನತೆ ಆರೋಪಿಸಿದ್ದಾರೆ.

ಇಸ್ರೇಲ್ ವಸಾಹತು ಕಾಲನಿಗಳನ್ನು ವಿಸ್ತರಿಸುವ ಸಲುವಾಗಿ ಅದು ಪಶ್ಚಿಮ ದಂಡೆಗಳ ಮೇಲೆ ದಾಳಿ ನಡೆಸುವುದು ಕಾನೂನುಬಾಹಿರ ಎಂದು ಹೇಳಲಾಗುತ್ತಿದೆ.

- Advertisement -

ಈ ಮಧ್ಯೆ ನೂರಾರು ಫೆಲೆಸ್ತೀನ್ ನಾಗರಿಕರು ಟೈರ್ ಗಳಿಗೆ ಬೆಂಕಿ ಹಚ್ಚಿ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಆರೋಪಿಸಿದೆ.

Join Whatsapp