ಜೆರುಸಲೇಂ : ಆಧುನಿಕ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್’ಗೆ ತೆರಳಿದ್ದ ಕೇರಳದ ರೈತರೊಬ್ಬರು ನಾಪತ್ತೆಯಾಗಿದ್ದು, ರೈತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇಸ್ರೇಲ್ ಸರ್ಕಾರ ತಿಳಿಸಿದೆ.
ಕಣ್ಣೂರು ಜಿಲ್ಲೆಯ ಉಲಿಕಲ್ ನಿವಾಸಿಯಾಗಿರುವ ಬಿಜು ಕುರಿಯನ್ ನಾಪತ್ತೆಯಾದ ರೈತ.
ಬಿಜು ಕುರಿಯನ್ ಅವರು ಕೇರಳ ರೈತ ನಿಯೋಗದ 28 ಸದಸ್ಯರ ಪೈಕಿ ಒಬ್ಬರಾಗಿದ್ದರು. ಇಸ್ರೇಲ್ಗೆ ಭೇಟಿ ನೀಡಿದ್ದ ವೇಳೆ ಫೆ.17ರಂದು ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರನ್ನು ಹುಡಕಲು ಸ್ಥಳೀಯ ಸರ್ಕಾರ ಪ್ರಯತ್ನ ಪಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಿಜು ಕುರಿಯನ್ ಸಿಕ್ಕಿದ ಬಳಿಕ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಇಸ್ರೇಲ್ ಸರ್ಕಾರ ಹೇಳಿದೆ.