ಕೇರಳ ಚುನಾವಣೆ | ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿಗೆ ಕೇವಲ 1 ವೋಟಿನಿಂದ ಬಿಜೆಪಿ ಎದುರು ಸೋಲು!

Prasthutha|

ತಿರುವನಂತಪುರಂ : ಕೇರಳ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಕೆಲವೆಡೆ ಅಚ್ಚರಿದಾಯಕ ಫಲಿತಾಂಶಗಳು ಹೊರಬಿದ್ದಿವೆ. ಕೊಚ್ಚಿ ಕಾರ್ಪೊರೇಶನ್ ನಲ್ಲಿ ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಎನ್. ವೇಣುಗೋಪಾಲ್ ಅವರನ್ನು ಬಿಜೆಪಿಯ ಅಭ್ಯರ್ಥಿ ಕೇವಲ ಒಂದು ವೋಟಿನಿಂದ ಸೋಲಿಸಿದ ಘಟನೆ ನಡೆದಿದೆ.

“ಇದು ಖಚಿತವಾದ ಗೆಲುವಿನ ಸೀಟಾಗಿತ್ತು. ಏನು ನಡೆಯಿತೆಂದು ನನಗೆ ಹೇಳಲು ಸಾಧ್ಯವಾಗುತ್ತಿಲ್ಲ. ಪಕ್ಷದೊಳಗೆ ಏನೂ ಸಮಸ್ಯೆಯಿರಲಿಲ್ಲ. ಮತಯಂತ್ರದಲ್ಲಿ ಸಮಸ್ಯೆಯಿದ್ದು. ಬಿಜೆಪಿ ಗೆಲುವಿಗೆ ಇದು ಕಾರಣವಾಗಿರಬಹುದು’’ ಎಂದು ವೇಣುಗೋಪಾಲ್ ಹೇಳಿದ್ದಾರೆ.

- Advertisement -