ಲಾಕ್ ಡೌನ್ ನಿಯಮ ಉಲ್ಲಂಘನೆಯ ಆರೋಪ | 36 ವಿದೇಶಿ ತಬ್ಲೀಘಿಗಳು ಎಲ್ಲಾ ಆರೋಪಗಳಿಂದ ಖುಲಾಸೆ

Prasthutha|

ನವದೆಹಲಿ : ಕೋವಿಡ್ 19 ಲಾಕ್ ಡೌನ್ ವೇಳೆ ದೆಹಲಿಯ ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಕೋವಿಡ್ ಸಂಬಂಧಿತ ಮಾರ್ಗಸೂಚಿ ಉಲ್ಲಂಘಿಸಿದ್ದ ಆರೋಪ ಹೊತ್ತಿದ್ದ 14 ರಾಷ್ಟ್ರಗಳ 36 ವಿದೇಶಿ ಪ್ರಜೆಗಳನ್ನು ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.

- Advertisement -

36 ವಿದೇಶಿ ಪ್ರಜೆಗಳ ವಿರುದ್ಧದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಲಾಗಿದೆ ಎಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗಾರ್ಗ್ ತೀರ್ಪು ನೀಡಿದ್ದಾರೆ.

ತಬ್ಲೀಘಿ ಜಮಾತ್ ಸಮಾವೇಶದಲ್ಲಿ ಭಾಗಿಯಾಗಿದ್ದ ವಿದೇಶಿ ಪ್ರಜೆಗಳು ಸೇರಿದಂತೆ ನೂರಾರು ಮಂದಿಯನ್ನು ಖಳನಾಯಕರಂತೆ ಬಿಂಬಿಸಲಾಗಿತ್ತು. ಕೋವಿಡ್ 19 ಹರಡಲು ಇವರು ಉದ್ದೇಶಪೂರ್ವಕವಾಗಿ ಜಮಾಯಿಸಿದ್ದರು ಎಂಬಂತೆ ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿದ್ದವು. ಕೋವಿಡ್ 19 ವಿಚಾರದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಈ ಸಂದರ್ಭವನ್ನು ಬಳಸಿಕೊಳ್ಳಲಾಗಿತ್ತು.

Join Whatsapp