ಕೇರಳ ಬೋಟ್ ದುರಂತಕ್ಕೆ ಕಾರಣ ಓವರ್ ಲೋಡ್| ಅಪಘಾತ ಸಂಭವಿಸಬಹುದೆಂದು ಎಚ್ಚರಿಕೆ ನೀಡುವ ವೀಡಿಯೋ ವೈರಲ್! 

Prasthutha|

ಮಲಪ್ಪುರಂ: ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದಿರುವುದೇ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಬೋಟ್ ದುರಂತಕ್ಕೆ ಕಾರಣ ಎಂಬ ಸ್ಥಳೀಯರ ಆರೋಪಕ್ಕೆ ಪುಷ್ಠಿ ನೀಡುವ ವೀಡಿಯೋ ಒಂದು ವೈರಲಾಗುತ್ತಿದೆ.

- Advertisement -

30 ಮಂದಿಯನ್ನು ಹೊತ್ತೊಯ್ಯಬಹುದಾದ ಸಾಮಾರ್ಥ್ಯ ಇರುವ ಬೋಟ್ ನಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ಹತ್ತಿಸಿದ್ದು ಬೋಟ್ ಮಗುಚಿ ಬೀಳಲು ಕಾರಣ ಎಂಬುದು ಸ್ಥಳೀಯರ ಆರೋಪ.

ಭಾನುವಾರವಾದ್ದರಿಂದ ನಿನ್ನೆ ಬೋಟ್ ಹತ್ತಲು ಸಾಕಷ್ಟು ಮಂದಿ ನೆರೆದಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಬೋಟ್‌ಗೆ ಹತ್ತಿಸಲಾಗಿತ್ತು.

- Advertisement -

ಆದರೆ, ಬೋಟ್‌ಗೆ ಹೆಚ್ಚು ಜನರನ್ನು ತುಂಬಿಸುತ್ತಿರುವುದನ್ನು ಕಂಡು ಸ್ಥಳೀಯರು ಪ್ರಯಾಣಕ್ಕೂ ಮುನ್ನವೇ ಎಚ್ಚರಿಕೆ ನೀಡಿದ್ದರು ಎಂಬುದಕ್ಕೆ ಪುರಾವೆಗಳು ಈಗ ಲಭ್ಯವಾಗಿದ್ದು, ಬೋಟ್‌ನ ಸಾಮಾರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದರೆ ಮಗುಚಿ ಬೀಳಬಹುದೆಂದು ಎಚ್ಚರಿಕೆ ನೀಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರಿಂದ ತುಂಬಿ ತುಳುಕುತ್ತಿರುವ ಬೋಟ್‌ಗೆ ಇನ್ನಷ್ಟು ಜನರನ್ನು ಆಹ್ವಾನಿಸುತ್ತಿರುವುದು ಮತ್ತು ಆ ವೇಳೆ ಸ್ಥಳೀಯರು ಎಚ್ಚರಿಕೆ ನೀಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.