ಕೇರಳ ಬೋಟ್ ದುರಂತ| ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆ!

Prasthutha|

ಮಲಪ್ಪುರಂ: ಜಿಲ್ಲೆಯ ತಾನೂರ್‌ನಲ್ಲಿ ನಡೆದ ಬೋಟ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

- Advertisement -

ದೋಣಿಯಲ್ಲಿ 40ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮೃತರಲ್ಲಿ ಆರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಆದರೆ ಮೃತರ ಗುರುತು ಪತ್ತೆಯಾಗಿಲ್ಲ ಎಂಬುದು ಪ್ರಾಥಮಿಕ ಮಾಹಿತಿ.

- Advertisement -

ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿರುವುದರಿಂದ 20 ಜನರು ಪ್ರಯಾಣಿಸಬಹುದಾದ ಬೋಟ್‌ನಲ್ಲಿ ಸುಮಾರು 40 ಜನರನ್ನು ಹತ್ತಿಸಿರುವುದು ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಭಾನುವಾರದ ಕೊನೆಯ ಟ್ರಿಪ್ ಆಗಿದ್ದರಿಂದ ಬಾಕಿ ಉಳಿದವರನ್ನು ಕೂಡ ಬೋಟ್‌ಗೆ ಹತ್ತಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.