ಕೇರಳ ಸ್ಫೋಟ ಪ್ರಕರಣ: IED ಪ್ರಯೋಗಿಸುವ ಕೌಶಲ್ಯ ಪಡೆದಿದ್ದ ಡೊಮಿನಿಕ್ ಮಾರ್ಟಿನ್

Prasthutha|

- Advertisement -

ಕೊಚ್ಚಿ: ಕೇರಳದಲ್ಲಿ ನಡೆದ ಸ್ಫೋಟದ ಬಗ್ಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಸ್ಫೋಟ ನಡೆಸಿದ್ದೇನೆಂದು ಶರಣಾಣಾದ ಮಾರ್ಟಿನ್ ಎರಡು ತಿಂಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಎಲೆಕ್ಟ್ರಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಐಇಡಿ ಪ್ರಯೋಗಿಸುವ ಕೌಶಲ್ಯವನ್ನು ಪಡೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸ್ಫೋಟಕಗಳನ್ನು ಹೇಗೆ ತಯಾರಿಸಬೇಕೆಂದು ತಿಳಿಯಲು ಡೊಮಿನಿಕ್ ಮಾರ್ಟಿನ್ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹುಡುಕಿದ್ದು, ಕೊಚ್ಚಿಯ ತಮ್ಮನಂನಲ್ಲಿರುವ ತನ್ನ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಐಇಡಿ ತಯಾರಿಸಿದ್ದನು. ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ಗೆ ಕೊಂಡೊಯ್ದಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

- Advertisement -

ಮೊದಲು ಐಇಡಿಗಳನ್ನು ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಕನ್ವೆನ್ಷನ್ ಹಾಲ್‌ನಲ್ಲಿ ಇರಿಸಿದ ಮಾರ್ಟಿನ್ ಹತ್ತಿರದಲ್ಲಿಯೇ ಕಾಯುತ್ತಿದ್ದನು ಮತ್ತು ಎರಡು ರಿಮೋಟ್‌ಗಳನ್ನು ಬಳಸಿ ಸ್ಫೋಟಗೊಳಿಸಿದ್ದಾನೆ. ನಂತರ ತ್ರಿಶೂರ್ ಹೊಟೆಂಲೊಂದಕ್ಕೆ ಹೋಗಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿ ಅಲ್ಲಿಂದ ತಪ್ಪೊಪ್ಪಿಗೆ ವಿಡಿಯೋ ಅಪ್‌ಲೋಡ್ ಮಾಡಿದ್ದಾನೆ. ಆ ಹೊಟೇಲ್‌ನಲ್ಲಿ ಅರ್ಧ ಗಂಟೆಗೂ ಕಡಿಮೆ ಸಮಯವನ್ನು ಕಳೆದ ಬಳಿಕ ತ್ರಿಶೂರ್‌ನ ಕೊಡಕರ ಪೊಲೀಸ್ ಠಾಣೆಗೆ ಬಂದು ಸ್ಫೋಟದ ಹೊಣೆಯನ್ನು ಒಪ್ಪಿಕೊಂಡಿದ್ದಾನೆ.

ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಮಾರ್ಟಿನ್‌ನನ್ನು ವಿಚಾರಣೆ ನಡೆಸಿದ್ದು,ಯಾವುದೇ ಸಹಚರರು ಇಲ್ಲದೆ ಸ್ವತಃ ತಾನೇ ಸ್ಫೋಟಗಳನ್ನು ನಡೆಸಿರುವುದೆಂದು ಆರೋಪಿ ಹೇಳಿದ್ದಾನೆ.

Join Whatsapp