ಹೊಸದಿಲ್ಲಿ: ಲೋಕಪಾಲ್ ಅಭಿಯಾನದಲ್ಲಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಭಾಗವಹಿಸಿರುವುದಕ್ಕೆ ಮತ್ತು ಅವರಿಗೆ ಸಹಾಯ ಮಾಡಿರುವುದಕ್ಕೆ ನಾನು ನಾಚಿಕೆಪಡುತ್ತೇನೆ. ಕೇಜ್ರಿವಾಲ್ ಹಿಂದುತ್ವ ರಾಷ್ಟ್ರೀಯತೆಯಲ್ಲಿ ಬಿಜೆಪಿಯನ್ನು ಮೀರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಮುಖ ವಕೀಲ ಪ್ರಶಾಂತ್ ಭೂಷಣ್ ತಮ್ಮ ಫೇಸ್‌ಬುಕ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರಕ್ಕೆ ವೃದ್ಧರಿಗೆ ಉಚಿತ ಪ್ರಯಾಣ ನೀಡಲಾಗುವುದು ಎಂಬ ದೆಹಲಿ ಮುಖ್ಯಮಂತ್ರಿಯ ಹೇಳಿಕೆಯಿರುವ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಹಿಂದುತ್ವ ರಾಷ್ಟ್ರೀಯತೆಯಲ್ಲಿ ಕೇಜ್ರಿವಾಲ್ ಬಿಜೆಪಿಯನ್ನು ಮೀರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ತಮ್ಮ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಲೋಕಪಾಲ್ ಅಭಿಯಾನದಲ್ಲಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಭಾಗವಹಿಸಿರುವುದನ್ನು ಮತ್ತು ಅವರಿಗೆ ಸಹಾಯ ಮಾಡಿರುವುದನ್ನು ಇಂದು ನಾನು ನಾಚಿಕೆಪಡುತ್ತೇನೆ. ಅವರು ಆ ಪ್ರಚಾರವನ್ನು ಮುಖ್ಯಮಂತ್ರಿಯಾಗಲು ಬಳಸಿದರು. ಈಗ ಹಿಂದುತ್ವ ರಾಷ್ಟ್ರೀಯತೆಯಲ್ಲಿ ಬಿಜೆಪಿಯನ್ನು ಮೀರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಈ ಹಿಂದೆಯೂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ರಾಮ ಮಂದಿರದ ವಿಷಯದಲ್ಲಿ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದಿತ್ತು. ಆಮ್ ಆದ್ಮಿ ಪಕ್ಷವು ಆರ್‌ಎಸ್‌ಎಸ್‌ನ ‘ಬಿ’ ಟೀಮ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಟೀಕಿಸಿದ್ದಾರೆ.