ವಿಶ್ವದ 30 ಕಲುಷಿತ ನಗರಗಳಲ್ಲಿ 22 ನಗರಗಳು ಭಾರತದಲ್ಲೇ !

Prasthutha|

- Advertisement -

ವಿಶ್ವದ 30 ಹೆಚ್ಚು ಕಲುಷಿತ ನಗರಗಳಲ್ಲಿ ಇಪ್ಪತ್ತೆರಡು ನಗರಗಳು ಭಾರತದಲ್ಲಿದೆ ಎಂದು ಜಾಗತಿಕವಾಗಿ ಬಿಡುಗಡೆಯಾದ ‘ವಿಶ್ವ ವಾಯು ಗುಣಮಟ್ಟ ವರದಿ – 2020′ IQ ಏರ್ ಸ್ವಿಸ್ ಸಂಸ್ಥೆಯೊಂದು ವರದಿ ಮಾಡಿದೆ. “ಭಾರತವು ಹೆಚ್ಚು ಕಲುಷಿತ ನಗರಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಜಾಗತಿಕವಾಗಿ ಅಗ್ರ 30 ಕಲುಷಿತ ನಗರಗಳಲ್ಲಿ ಭಾರತದ 22 ನಗರಗಳು ಸ್ಥಾನ ಪಡೆದಿವೆ” ಎಂದು ವರದಿ ತಿಳಿಸಿದೆ.
ಕಲುಷಿತವಾದ ಇಪ್ಪತ್ತೆರಡು ನಗರದಲ್ಲಿ ದೆಹಲಿಯು ಜಾಗತಿಕವಾಗಿ ಹೆಚ್ಚು ಕಲುಷಿತ ರಾಜಧಾನಿಯಾಗಿ ಸ್ಥಾನ ಪಡೆದಿದೆ ಎಂದು ವರದಿ ತಿಳಿಸಿದೆ. ದೆಹಲಿಯಲ್ಲದೆ ವಿಶ್ವದ ಅತಿ ಹೆಚ್ಚು ಕಲುಷಿತವಾದ 30 ನಗರಗಳಲ್ಲಿ 21 ಇತರ ನಗರಗಳು ಘಜಿಯಾಬಾದ್, ಬುಲಂದ್‌ಶಹರ್, ಬಿಸ್ರಖ್ ಜಲಾಲ್‌ಪುರ್, ನೋಯ್ಡಾ, ಗ್ರೇಟರ್ ನೋಯ್ಡಾ, ಕಾನ್ಪುರ್, ಲಕ್ನೋ, ಮೀರತ್, ಆಗ್ರಾ , ಉತ್ತರಪ್ರದೇಶದ ಮುಜಫರ್‌ನಗರ, ರಾಜಸ್ಥಾನದ ಭೀವರಿ, ಜಿಂದ್ , ಹಿಸಾರ್, ಫತೇಹಾಬಾದ್, ಬಾಂಧ್ವಾರಿ, ಗುರುಗ್ರಾಮ್, ಯಮುನಾ ನಗರ, ಹರಿಯಾಣದ ರೋಹ್ಟಕ್ ಮತ್ತು ಧರುಹೆರಾ, ಮತ್ತು ಬಿಹಾರದ ಮುಜಫರ್ಪುರ್ ಮುಂತಾದುವುಗಳು ಎಂದು ವರದಿಯಲ್ಲಿ ದಾಖಲಾಗಿದೆ.

ಜಾಗತಿಕ ನಗರಗಳ ಶ್ರೇಯಾಂಕ ವರದಿಯು 106 ದೇಶಗಳ ದತ್ತಾಂಶವನ್ನು ಆಧರಿಸಿದ್ದು ಇದನ್ನು ಭೂ-ಆಧಾರಿತ ಮೇಲ್ವಿಚಾರಣಾ ಕೇಂದ್ರಗಳು ಮಾಪನ ಮಾಡುತ್ತದೆ. ಭಾರತದ ವಾಯುಮಾಲಿನ್ಯದ ಪ್ರಮುಖ ಮೂಲಗಳು ಸಾರಿಗೆ, ಅಡುಗೆಗಾಗಿ ಜೀವರಾಶಿ ಸುಡುವಿಕೆ, ವಿದ್ಯುತ್ ಉತ್ಪಾದನೆ, ಕೈಗಾರಿಕೆ, ನಿರ್ಮಾಣ, ತ್ಯಾಜ್ಯ ಸುಡುವಿಕೆ ಮತ್ತು ಎಪಿಸೋಡಿಕ್ ಕೃಷಿ ಸುಡುವಿಕೆ ಎಂದು ತಿಳಿದು ಬಂದಿವೆ.

- Advertisement -

ಈ ವರದಿಯ ನಂತರ ನರೇಂದ್ರ ಮೋದಿ ಪ್ರಾರಂಭಿಸಿದ್ದ ‘ಸ್ವಚ್ಛ ಭಾರತ್’ ಅಭಿಯಾನದ ಅಸಲಿ ಕಥೆಯೇನು ಎಂದು ಜನರು ಪ್ರಶ್ನಿಸಿದ್ದಾರೆ. ಭಾರತದ 22 ನಗರಗಳು ಕಲುಷಿತ ನಗರಗಳ ಪಟ್ಟಿಯಲ್ಲಿರುವುದು ಸ್ವಚ್ಛ ಭಾರತ ಅಭಿಯಾನವನ್ನೇ ಸಂಶಯದ ಸುಳಿಯಲ್ಲಿಟ್ಟಿದೆ

Join Whatsapp