ಅರವಿಂದ್ ಕೇಜ್ರಿವಾಲ್ ಓರ್ವ ವೇಷಧಾರಿ, ಚೋಟಾ ಮೋದಿ; ರಣದೀಪ್ ಸುರ್ಜೇವಾಲ

Prasthutha|

ಪಣಜಿ: ದೆಹಲಿ‌ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಓರ್ವ, ವೇಷಧಾರಿ, ಚೋಟಾ ಮೋದಿ ಎಂದು AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.
ಪಣಜಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಸುರ್ಜೇವಾಲ, ಬಿಜೆಪಿಯ ಅಣತಿಯಂತೆ ಆಮ್ ಆದ್ಮಿ ಪಕ್ಷ ಗೋವಾ ಚುನಾವಣೆಯಲ್ಲಿ ಸ್ವರ್ಧಿಸುತ್ತಿದೆ. ಗೋವಾ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿಯು ನೆಲೆ ಕಳೆದುಕೊಂಡಿದೆ. ಹೀಗಾಗಿ RSS ಹಾಗೂ ಬಿಜೆಪಿ ಪ್ರತಿನಿಧಿಯಾಗಿ ಕೇಜ್ರೀವಾಲ್ ಕಣದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರದ್ದು ಸರ್ವಾಧಿಕಾರಿ ಸ್ವಭಾವ, ನಿರಂಕುಶಪ್ರಭುತ್ವ, ಕೇಜ್ರಿವಾಲ್ ಚೋಟಾ ಮೋದಿ ಅಲ್ಲದೇ ಇನ್ನೇನೂ ಅಲ್ಲ ಎಂದು ಸುರ್ಜೇವಾಲ ಹೇಳಿದ್ದಾರೆ.
ಬಿಜೆಪಿಯ ನಿರ್ದೇಶನ ಹಾಗೂ ಸಹಾಯದಿಂದ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಅಲ್ಲಿನ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ಹೊರ ಬರುತ್ತಿಲ್ಲ. ಆಮ್ ಆದ್ಮಿ ಸರ್ಕಾರದ ಕನಿಷ್ಠ ಶೇ.10ರಷ್ಟು ಭ್ರಷ್ಟಾಚಾರ ಪ್ರಕರಣಗಳು ಹೊರ ಬರುತ್ತಿದ್ದರೆ ಕೇಜ್ರಿವಾಲ್ ವರ್ಷಗಳ ಹಿಂದೆಯೇ ಜೈಲು ಸೇರುತ್ತಿದ್ದರು ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ

Join Whatsapp