ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯ ನಾಮಪತ್ರ ಸಲ್ಲಿಕೆ ಇಂದಿನಿಂದ (ಮಾರ್ಚ್ 28) ಆರಂಭವಾಗುತ್ತಿದೆ.

- Advertisement -


ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅಧಿಸೂಚನೆ ಪ್ರಕಟಗೊಂದ ಬೆನ್ನಲ್ಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.4ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ.8ರಂದು ಉಮೇದುವಾರಿಕೆಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಏ.26ರಂದು ಮತದಾನ ನಡೆಯಲಿದೆ. ಜೂ.4ರಂದು ಫಲಿತಾಂಶ ಹೊರಬೀಳಲಿದೆ.


ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕರ್ನಾಟಕದ ಲೋಕಸಭಾ ಕ್ಷೇತ್ರಗಳು ಇಂತಿವೆ…
• ಉಡುಪಿ – ಚಿಕ್ಕಮಗಳೂರು
• ಹಾಸನ
• ದಕ್ಷಿಣ ಕನ್ನಡ
• ಚಿತ್ರದುರ್ಗ (ಎಸ್ಸಿ)
• ತುಮಕೂರು
• ಮಂಡ್ಯ
• ಮೈಸೂರು
• ಚಾಮರಾಜನಗರ (ಎಸ್ಸಿ)
• ಬೆಂಗಳೂರು ಗ್ರಾಮಾಂತರ
• ಬೆಂಗಳೂರು ಉತ್ತರ
• ಬೆಂಗಳೂರು ಕೇಂದ್ರ
• ಬೆಂಗಳೂರು ದಕ್ಷಿಣ
• ಚಿಕ್ಕಬಳ್ಳಾಪುರ
• ಕೋಲಾರ (ಎಸ್ಸಿ)

Join Whatsapp