ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾಜಿ ಕ್ರಿಕೆಟಿಗ ಮತ್ತು ಹಾಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಪಠಾಣ್ ಅವರು 2011ರ ಐಸಿಸಿ ವಿಶ್ವಕಪ್ ಪೋಸ್ಟರ್ ಗಳನ್ನು ಬಳಸಿದ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದೆ.
ಬಹರಾಂಪುರ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು 2011 ರ ಕ್ರಿಕೆಟ್ ವಿಶ್ವಕಪ್ನ ವಿಜೇತ ಫೋಟೋಗಳನ್ನು ತೋರಿಸುವ ಬ್ಯಾನರ್ ಗಳನ್ನು ಮತ್ತು ಪೋಸ್ಟರ್ ಗಳನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ಯೂಸುಫ್ ಪಠಾಣ್ ಅವರು ಈ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಬ್ಯಾನರ್ ಗಳು ಮತ್ತು ಫೋಟೋಗಳನ್ನು ಬಳಸಲು ಪ್ರಾರಂಭಿಸಿದ್ದಾರೆ, ಇದು ಐಸಿಸಿ ಕ್ರಿಕೆಟ್ ವಿಶ್ವಕಪ್, 2011 ರ ವಿಜೇತ ಕ್ಷಣಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ, ಅಲ್ಲಿ ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತು ಇತರರು ಸೇರಿದಂತೆ ನಮ್ಮ ರಾಷ್ಟ್ರದ ಉನ್ನತ ಕ್ರಿಕೆಟ್ ಸೆಲೆಬ್ರಿಟಿಗಳ ಫೋಟೋಗಳು ಇವೆ. ” ಎಂದು ದೂರಿನಲ್ಲಿ ತಿಳಿಸಲಾಗಿದೆ.