ನವದೆಹಲಿ: ಕಾಶ್ಮೀರಿ ಪಂಡಿತರ ನೈಜತೆ ಎಂದು ದೇಶಾದ್ಯಂತ ತೆರೆಕಂಡು ಸುದ್ದಿಯಾದ ಕಾಶ್ಮೀರಿ ಫೈಲ್ಸ್ ಸಿನಿಮಾ ತಂಡವು ಗಳಿಸಿದ ಸಂಪೂರ್ಣ ಹಣವನ್ನು ಸರ್ಕಾರಕ್ಕೆ ನೀಡಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿದು ಬಂದಿದೆ.
ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಧಾನಿ ಮೋದಿಯವರನ್ನು ಬೇಟಿ ಮಾಡಿದ ಚಿತ್ರವೊಂದನ್ನು ಹಂಚಿಕೊಂಡು ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾದಿಂದ ಗಳಿಸಿದ ಪೂರ್ತಿ ಹಣ 200 ಕೋಟಿ ರೂಪಾಯಿಗಳನ್ನು ಪ್ರಧಾನಿ ವಿಪತ್ತು ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ ಎಂದು ಹೇಳಿ ಶೇರ್ ಮಾಡಲಾಗಿತ್ತು. ಹಲವು ಮಂದಿ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ವಿವೇಕ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.
ಆದರೆ ಈ ಸುದ್ದಿಯನ್ನು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಮಾರ್ಚ್ 12 ರಂದು ನಿರ್ದೇಶಕ ವಿವೇಕ್ , ಪತ್ನಿ ಪಲ್ಲವಿ ಜೋಶಿ ಮತ್ತು ನಿರ್ದೇಶಕ ಅಭಿಷೇಕ್ ಅಗರ್ವಾಲ್ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದರು. ಅದರ ಹೊರತಾಗಿ ದೇಣಿಗೆ ಏನೂ ನೀಡಿರಲಿಲ್ಲ. ಈ ಬಗ್ಗೆ ಪ್ರಧಾನಿಯವರಾಗಲಿ ನಿರ್ದೇಶಕರಾಗಲಿ ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಹೀಗಾಗಿ 200 ದೇಣಿಗೆ ಎಂಬುವುದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ.