ʼದೇಶದ್ರೋಹʼ ಘೋಷಣೆಯ ಆರೋಪ | ಯುಎಪಿಎಯಡಿ ಕೇಸ್‌ ದಾಖಲಾಗಿದ್ದ ಕಾಶ್ಮೀರದ ಅಪ್ರಾಪ್ತ ವಯಸ್ಕನಿಗೆ ಜಾಮೀನು

Prasthutha|

 ಶ್ರೀನಗರ : ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿತನಾಗಿದ್ದ ಕಾಶ್ಮೀರ ಕಣಿವೆಯ ಅಪ್ರಾಪ್ತ ವಯಸ್ಕನಿಗೆ ಬಾಲಪರಾಧ ನ್ಯಾಯ ಮಂಡಳಿ ಜಾಮೀನು ಮಂಜೂರು ಮಾಡಿದೆ. ಆರೋಪಿ ಬಾಲಕನ ಕೃತ್ಯವನ್ನು ಘೋರ ಎಂದು ಹೇಳಲು ಸಾಧ್ಯವಿಲ್ಲವೆಂದು ನ್ಯಾಯ ಮಂಡಳಿ ಅಭಿಪ್ರಾಯ ಪಟ್ಟಿದೆ.

- Advertisement -

ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಭಯೋತ್ಪಾದನೆ ನಿಗ್ರಹ ತಡೆಗೆ ಬಳಸಲಾಗುವ ಕಾನೂನಿನಡಿ ಕ್ರಮ ಕೈಗೊಳ್ಳಲಾಗಿತ್ತು. ಕುಪ್ವಾರ ಜಿಲ್ಲೆಯಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರ ವೇಳೆ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದನು ಎಂದು ಬಾಲಕನ ವಿರದ್ಧ ದೂರು ದಾಖಲಾಗಿತ್ತು.

ಅಪ್ತಾಪ್ತ ವಯಸ್ಕನು ಕೂಗಿರುವ ಘೋಷಣೆ ಗಂಭೀರವಾದುದಾದರೂ, ಘೋರವಾದುದಲ್ಲ ಎಂದು ಬಾಲಪರಾಧ ನ್ಯಾಯ ಮಂಡಳಿ ಅಭಿಪ್ರಾಯ ಪಟ್ಟಿದೆ. ಕಾನೂನಿನ ಪ್ರಕಾರ, ಬಾಲಕನ ವಿರುದ್ಧ ಎಫ್‌ ಐಆರ್‌ ದಾಖಲಿಸುವಂತಿಲ್ಲ. ಘೋರ ಅಪರಾಧಗಳ ಸಂದರ್ಭದಲ್ಲಿ ಮಾತ್ರ ಅಪ್ರಾಪ್ತ ವಯಸ್ಕನ ವಿರುದ್ಧ ಎಫ್‌ ಐಆರ್‌ ದಾಖಲಿಸಬಹುದು. ಘೋರ ಅಪರಾಧವಲ್ಲದ ಪ್ರಕರಣಗಳ ಸಂದರ್ಭಗಳಲ್ಲಿ ಕೇವಲ ಜನರಲ್‌ ಡೈರಿಯಲ್ಲಿ ವರದಿ ದಾಖಲಿಸಬಹುದು ಎಂದು ಮಂಡಳಿ ತಿಳಿಸಿದೆ.

Join Whatsapp