ಬುಕ್ಕಿಂಗ್ ಸ್ಥಗಿತಗೊಳಿಸಿದ ವಿಮಾನಯಾನ ಸಂಸ್ಥೆಗಳು | UAE ಪ್ರವಾಸಿಗರಿಗೆ ಮತ್ತೆ ನಿರಾಶೆ

Prasthutha|

ವಿಮಾನ ಹಾರಾಟ ನಿಷೇಧಕ್ಕೆ ಸಂಬಂಧಿಸಿದ ಅಸ್ಪಷ್ಟತೆಗಳಿಂದಾಗಿ ವಿಮಾನಯಾನ ಸಂಸ್ಥೆಗಳು ಬುಕಿಂಗ್ ಅನ್ನು ಇದೀಗ ಸ್ಥಗಿತಗೊಳಿಸಿದ್ದು, ಈ ನಿಟ್ಟಿನಲ್ಲಿ ಯಾವುದೇ ಹೊಸ ಅಧಿಸೂಚನೆ ಲಭಿಸದ ಕಾರಣ ಲಸಿಕೆ ಪಡೆದವರು ಇಂದಿನಿಂದ ದುಬೈಗೆ ಮರಳಬಹುದು ಎಂಬ ವಿಶ್ವಾಸದಲ್ಲಿದ್ದ ಪ್ರವಾಸಿಗಳು ನಿರಾಶೆಗೊಂಡಿದ್ದಾರೆ.

- Advertisement -

ದುಬೈ ವಿಪತ್ತು ನಿರ್ವಹಣಾ ಪ್ರಾಧಿಕಾರ ವಿಮಾನ ಹಾರಾಟಕ್ಕೆ ಶನಿವಾರ ಅನುಮತಿ ನೀಡಿತ್ತು. ಅದರಂತೆ ಇಂದಿನಿಂದ ದುಬೈಗೆ ಭಾರತದಿಂದ ವಿಮಾನ ಹಾರಾಟಕ್ಕೆ ಅನುಮತಿ ಲಭಿಸಿತ್ತು. ಎರಡು ಡೋಸ್ ಲಸಿಕೆಯನ್ನು ಪಡೆದವರು ಮತ್ತು ವಿಮಾನ ಹೊರಡುವ ನಾಲ್ಕು ಗಂಟೆಗಳ ಮೊದಲು ಕೋವಿಡ್ ಫಲಿತಾಂಶವು ನೆಗೆಟಿವ್ ವರದಿ ಇರುವವರಿಗೆ ಪ್ರಯಾಣಿಸಬಹುದು ಎಂಬ ನಿಬಂಧನೆಗಳೊಂದಿಗೆ ಅನುಮತಿ ನೀಡಲಾಗಿತ್ತು.

ಇಂದು ವಿಮಾನ ಹಾರಾಟ ಪ್ರಾರಂಭಿಸುವ ಬಗ್ಗೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಿಲ್ಲ. ಏರ್ ಇಂಡಿಯಾ ಮಾತ್ರ ಮುಂದಿನ ತಿಂಗಳು 6ರ ವರೆಗೆ ವಿಮಾನ ಹಾರಾಟ ನಿಷೇಧವಿರುವ ಕಾರಣ ಯಾವುದೇ ವಿಮಾನ ನಿಲ್ದಾಣಕ್ಕೆ ಪ್ರಯಾಣ ಇರುವುದಿಲ್ಲ ಎಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.




Join Whatsapp