ಮಧ್ಯರಾತ್ರಿ ದಾಳಿಯ ವೇಳೆ ಕಾಶ್ಮೀರದಲ್ಲಿ ಪತ್ರಕರ್ತನ ಬಂಧನ

Prasthutha|

ಜಮ್ಮು: ಶ್ರೀನಗರ ಮೂಲದ ಪತ್ರಕರ್ತ ಮತ್ತು ಛಾಯಾಗ್ರಾಹಕ ಮುಖ್ತಾರ್ ಝಹೂರ್ ಅವರ ದಾಲ್ ಗೇಟ್ ನಲ್ಲಿರುವ ನಿವಾಸಕ್ಕೆ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಿ ಅವರನ್ನು ಬಂಧಿಸಲಾಗಿದೆ.

- Advertisement -

ಪ್ರಸಕ್ತ ಅವರು ಬಿಬಿಸಿಯಲ್ಲಿ ಸ್ಟ್ರಿಂಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ ಜಝೀರಾ, ದಿ ಕಾರವಾನ್, ಬ್ಲೂಮ್ ಬರ್ಗ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಅವರ ವರದಿಗಳು ಪ್ರಕಟಗೊಳ್ಳುತ್ತವೆ.

ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರು ಅವರ ಹೆಸರನ್ನು ವಿಚಾರಿಸಿ ಮುಖ್ತಾರ್ ಎಂದು ಉತ್ತರಿಸುತ್ತಿದ್ದಂತೆ ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಅವರ ಕ್ಯಾಮಾರವನ್ನು ಕೂಡ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆತನ ಸಹೋದರಿ ಸೈಮಾ ಝಹೂರಿ ಅವರು ಮಾಧ್ಯಮಕ್ಕೆ ತಿಳಿಸಿದರು.

- Advertisement -

ತಡರಾತ್ರಿ ಸುಮಾರು 12.30 ಕ್ಕೆ ಪತ್ರಕರ್ತ ಮುಖ್ತಾರ್ ನಿವಾಸಕ್ಕೆ ದಾಳಿ ನಡೆಸಿ ಬಂಧಿಸಲಾಗಿದೆ.

ಬಂಧನದ ಸಂದರ್ಭದಲ್ಲಿ ಕ್ಯಾಮರಾ, ಪ್ರೆಸ್ ಐಡಿ ಕಾರ್ಡ್ ಮತ್ತು ಆತನ ಮೊಬೈಲ್ ನೊಂದಿಗೆ ಸಹೋದರಿಯ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.

ಈ ಮಧ್ಯೆ ಪತ್ರಕರ್ತ ಝಹೂರ್ ಅವರನ್ನು ರಾಮ್ ಮುನ್ಸಿ ಬಾಗ್ ಪೊಲೀಸರು ಠಾಣೆಯಲ್ಲಿ ರಾತ್ರಿಯಿಡೀ ಲಾಕ್ ಅಪ್ ನಲ್ಲಿ ಕೂಡಿ ಹಾಕಿದ್ದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಝಹೂರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಾತ್ರವಲ್ಲ ವಿಚಾರಣೆಯ ಬಳಿಕ ಆತನನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದೆಂದು ರಾಮ್ ಮುನ್ಸಿ ಬಾಗ್ ಠಾಣಾಧಿಕಾರಿ ತೌಸೀಫ್ ಮೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.



Join Whatsapp