ಹಾವೇರಿ: ಹಾನಗಲ್’ನಲ್ಲಿ ಕಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೂರು ವರ್ಷದ ಮಗು ಇಂದು ಮೃತಪಟ್ಟಿದ್ದು, ಇದರೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ.
ಕಾಸರಗೋಡಿನ ತಳಂಗರೆ ನುಸ್ರತ್ ನಗರದ ಸಿಯಾದ್ – ಸಜ್ನ ದಂಪತಿ ಪುತ್ರ ಮುಹಮ್ಮದ್(3) ಮೃತಪಟ್ಟ ಮಗು. ಕೇರಳದ ಕಾಸರಗೋಡು ಜಿಲ್ಲೆಯ ತಳಂಗರೆ ನುಸ್ರತ್ ನಗರದ ಮುಹಮ್ಮದ್ (65) ಪತ್ನಿ ಆಯಿಷಾ(62) ಸ್ಥಳದಲ್ಲೇ ಮಂಗಳವಾರ ಮೃತಪಟ್ಟಿದ್ದರು.
ಹುಬ್ಬಳ್ಳಿಯಿಂದ ಹಾನಗಲ್ ಕಡೆ ಹೊರಟಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಮೃತರ ಪುತ್ರ ಝಿಯಾದ್, ಸೊಸೆ ಹಾಗೂ ಮೊಮ್ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.