ಸಯ್ಯದ್ ಮುಷ್ತಕ್ ಅಲಿ ಟ್ರೋಫಿ: ಸೂಪರ್ ಓವರ್’ನಲ್ಲಿ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Prasthutha|

ನವದೆಹಲಿ: ಸಯ್ಯದ್ ಮುಷ್ತಕ್ ಅಲಿ ಟ್ರೋಫಿ ಪಂದ್ಯಾಕೂಟದ 2ನೇ ಕ್ವಾರ್ಟರ್ ಫೈನಲ್’ನಲ್ಲಿ ಸೂವರ್ ಓವರ್’ನಲ್ಲಿ ರೋಚಕ ಜಯ ಸಾಧಿಸಿದ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ 5 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಬಂಗಾಳ 8 ವಿಕೆಟ್ ನಷ್ಟದಲ್ಲಿ 160 ರನ್’ಗಳಿಸಿದ್ದರಿಂದ ಪಂದ್ಯ ಟೈ ಆಗಿ ಸೂಪರ್ ಓವರ್ ಕಾಣುವಂತಾಯಿತು.

- Advertisement -

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲ್ಲಲು ಬಂಗಾಳ ತಂಡಕ್ಕೆ ಕೊನೇಯ ಓವರ್’ನಲ್ಲಿ 20 ರನ್’ಗಳ ಅಗತ್ಯವಿತ್ತು. ವಿಧ್ಯಾದರ್ ಪಾಟೀಲ್ ಎಸೆದ ಓವರ್’ನ ಮೊದಲೆರಡು ಎಸೆತಗಳನ್ನು ಸಿಕ್ಸರ್’ಗೆ ಅಟ್ಟಿದ ರಿತ್ವಿಕ್ ಚೌಧರಿ ಪಂದ್ಯಕ್ಕೆ ತಿರುವುಕೊಟ್ಟರು. ಕೊನೇ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿತ್ತು. ಈ ವೇಳೆ ನಾಯಕ ಮನೀಷ್ ಪಾಂಡೆ ಚುರುಕುತನದ ಫೀಲ್ಡಿಂಗ್’ಗೆ ಆಕಾಶ್ ದೀಪ್ ರನೌಟ್ ಆದರು. ಹೀಗಾಗಿ ಪಂದ್ಯ ಟೈ ಆಗಿ ಸೂಪರ್ ಓವರ್’ಗೆ ಸಾಗಿತ್ತು.

ಸೂಪರ್ ಓವರ್’ನಲ್ಲಿ ಬಂಗಾಳ ತಂಡದ ಬ್ಯಾಟರ್’ಗಳಿಗೆ ಮಿಂಚಲು ಕೆಸಿ ಕಾರ್ಯಪ್ಪ ಅವಕಾಶ ನೀಡಲಿಲ್ಲ. 2ನೇ ಎಸೆತದಲ್ಲಿ ಕೈಫ್ ಅಹಮದ್ ವಿಕೆಟ್ ಪತನವಾದರೆ, 4ನೇ ಎಸೆತದಲ್ಲಿ ಗೋಸ್ವಾಮಿ ರನೌಟ್ ಆದರು ಹೀಗಾಗಿ ಗೆಲುವಿಗೆ ಕರ್ನಾಟಕ 6 ರನ್’ಗಳ ಗುರಿ ಪಡೆದಿತ್ತು. ಚೇಸಿಂಗ್’ ವೇಳೆ ಮೊದಲ ಎಸೆತದಲ್ಲಿ 2 ರನ್ ಕಲೆಹಾಕಿದ ನಾಯಕ ಮನೀಷ್ ಪಾಂಡೆ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಸೂಪರ್ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.

- Advertisement -
https://twitter.com/SgrYdv2/status/1461305528194265095

ಇದಕ್ಕೂ ಮುನ್ನ ಟಾಸ್ ಗೆದ್ದ ಬಂಗಾಳ ತಂಡದ ನಾಯಕ ಸುದಿಪ್ ಚಟರ್ಜಿ, ಕರ್ನಾಟಕವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದ್ದರು. ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಕೇವಲ 4 ರನ್ಗಳಿಸಿ ಓಪನರ್ ಶರತ್ ಔಟಾದರು. ಬಳಿಕ ರೋಹನ್ ಕದಮ್ 30 ಹಾಗೂ ನಾಯಕ ಮನೀಷ್ ಪಾಂಡೆ 29 ರನ್ ರನ್’ಗಳಿಸಿ ವಿಕೆಟ್ ಒಪ್ಪಿಸಿದರು. 4ನೇ ಕ್ರಮಾಂಕದಲ್ಲಿ ಕರುಣ್ ನಾಯರ್, ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 55 ರನ್’ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಕರ್ನಾಟಕ 5 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿತ್ತು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಾಲ್ ತಂಡದ ಆರಂಭದಲ್ಲೇ ಎಡವಿತ್ತು. ವಿದ್ಯಾಧರ್ ಪಾಟೀಲ್ ಬೌಲಿಂಗ್’ನಲ್ಲಿ ಆರಂಭಿಕ ಅಭಿಷೇಕ್ ದಾಸ್’ರನ್ನು ಶೂನ್ಯಕ್ಕೆ ಮರಳಿದರೆ, 22 ರನ್ ಗಳಿಸಿದ್ದ ವೇಳೆ ಶ್ರೀವಾತ್ಸ ಗೋಸ್ವಾಮಿ ರನೌಟ್’ಗೆ ಬಲಿಯಾದರು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ವೃತಿಕ್ ಚಟರ್ಜಿ 40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 51 ರನ್’ಗಳಿಸಿದರು.

ಕೊನೆಯ 2 ಓವರ್’ಗಳಲ್ಲಿ ಬಂಗಾಳದ ಗೆಲುವಿಗೆ 26 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ ಎಸೆದ ದರ್ಶನ್ ಕೇವಲ 6 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಕರ್ನಾಟಕದ ಕಡೆ ತಿರುಗಿಸಿದರಾದರೂ ಅಂತಿಮ ಓವರ್ನ ಮೊದಲೆರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ರಿತ್ವಿಕ್ ಚೌಧರಿ ಪಂದ್ಯದ ಚಿತ್ರಣ ಬದಲಿಸಿದರು.

Join Whatsapp