ಕಾವೇರಿ ನೀರಿಲ್ಲದೇ ರಾಜ್ಯ ಸಂಕಷ್ಟದಲ್ಲಿದೆ: ಸಚಿವ ಮಧು ಬಂಗಾರಪ್ಪ

Prasthutha|

ಶಿವಮೊಗ್ಗ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ ಸಿಡಬ್ಲ್ಯೂಸಿ (ಕಾವೇರಿ ನದಿ ನೀರು ಪ್ರಾಧಿಕಾರ) ವಿರುದ್ಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ಇಂದು ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರೆಯಲಾಗಿರುವ ಬಂದ್ ಮಾಡುವಂತದ್ದು, ಪ್ರತಿಭಟನೆ ನಡೆಸುವಂತದ್ದು ಅವರವರ ಅಧಿಕಾರವಾಗಿದೆ. ಸಾಮಾನ್ಯ ಜನರಿಗೆ ಹಾಗೂ ಆಸ್ತಿಗೆ ಹಾನಿಯನ್ನುಂಟು ಮಾಡದ ಹಾಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಕರ್ನಾಟಕ ರಾಜ್ಯ ಬಹಳ ಸಂಕಷ್ಟದಲ್ಲಿದೆ. ಸುಪ್ರಿಂ ಕೋರ್ಟ್ ನೀವೆ ತೀರ್ಮಾನ ಮಾಡಿ ಅಂತ ಹೇಳುತ್ತದೆ. ಕಾವೇರಿ ನೀರು ಹಂಚಿಕೆ ಪ್ರಾಧಿಕಾರದವರು ಮನಸ್ಸಿಗೆ ಬಂದ ಹಾಗೆ ತೀರ್ಮಾನ ಮಾಡುತ್ತಿದೆ ಎಂದರು.

- Advertisement -

ನಮ್ಮಲ್ಲಿ ವಸ್ತು ಸ್ಥಿತಿಯನ್ನು ಅರಿತುಕೊಳ್ಳಬೇಕು. ಅದೇ ರೀತಿ ಭದ್ರಾ ನದಿ ನೀರು ಸಹ ಆಗಿದೆ. ನಾಳೆಯಿಂದ ‌ನೀರು ಬಿಡಬೇಕಿದೆ. 10 ದಿನ ನೀರು ಹರಿಸಬೇಕಿದೆ. ಮತ್ತೆ ಬಂದ್ ಮಾಡಬೇಕಿದೆ. ದಾವಣಗೆರೆಯಲ್ಲಿ ನೀರು ಬಿಡಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತದೆ. ಅಲ್ಲಿನವರು ರೈತರು, ಇಲ್ಲಿನವರು ರೈತರು. ನೀರು ಬಿಟ್ಟರೆ, ಮುಂದೆ ಕುಡಿಯಲು ನೀರು ಇರುವುದಿಲ್ಲ. ಈಗ ‌ಮಳೆ ಇಲ್ಲದೆ ಹೋದ್ರೆ ನೀರು ಹೇಗೆ ಬಿಡುವುದು ಎಂದು ಪ್ರಶ್ನೆ ಮಾಡಿದರು.

ಅಚ್ಚುಕಟ್ಟು ಪ್ರದೇಶದ ರೈತರಿಗೆ ಭತ್ತ ಬೆಳೆಯಬೇಡಿ ಎಂದರು ಸಹ ಭತ್ತ ಬೆಳೆದಿದ್ದಾರೆ. ಅವರಿಗೆ ಭೂಮಿ ಇದೆ. ದುಡಿಯುವ ಕೈಗಳಿಗೆ ಕೆಲಸ ಬೇಕು ಅಂತ ಭತ್ತ ಹಾಕಿದ್ದಾರೆ. ಕಾವೇರಿ ಹಾಗೂ ಭದ್ರಾ ಒಂದೇ ರೀತಿಯ ಸಮಸ್ಯೆಯಾಗಿದೆ. ಕಾವೇರಿ ಅಂತರರಾಜ್ಯ ಸಮಸ್ಯೆ ಆದ್ರೆ, ಭದ್ರಾ ಎರಡು ಜಿಲ್ಲೆಗಳ ಸಮಸ್ಯೆ ಆಗಿದೆ ಎಂದರು.

128 ವರ್ಷಗಳಲ್ಲಿ ನಮ್ಮ ಸರ್ಕಾರಕ್ಕೆ ಬಂದಂತಹ ಪರಿಸ್ಥಿತಿ ಯಾರಿಗೂ ಬಂದಿಲ್ಲ. ನಮ್ಮ ತಂದೆಯವರು ಅಂದು ತೀರ್ಮಾನ ತೆಗೆದುಕೊಂಡಾಗ ಕಾನೂನು ರೀತಿ ನೀತಿ ಬೇರೆ, ಅವರು ಸಿಡಬ್ಲ್ಯೂಸಿ ವಿರುದ್ದ ಹೋಗಿದ್ರು, ನಾವು‌ ಈಗ ಸುಪ್ರೀಂ ಕೋರ್ಟ್ ಹಾಗೂ ಎಲ್ಲವನ್ನು ನೋಡಬೇಕಿದೆ. ಈ ಕುರಿತು ಸಿಎಂ ರವರು ಕ್ಯಾಬಿನೆಟ್ ನಲ್ಲಿ ಸುಧಿರ್ಘವಾಗಿ ಚರ್ಚೆ ನಡೆಸಿದ್ದಾರೆ. ನಮ್ಮ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕಣ್ ತೆಗೆದು ವಾಸ್ತವವನ್ನು ನೋಡಬೇಕಿದೆ. ಅವರು ವಾಸ್ತಾವವನ್ಬು ನೋಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ಮಂದ್ಯದಂಗಡಿಗೆ ಪರವಾನಿಗೆ ವಿವಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ಟೀಕಿಸುವುದಕ್ಕೆ ನಾನು ಉತ್ತರ ನೀಡಲು ಆಗಲ್ಲ. ಸರ್ಕಾರ ನಮ್ಮದು ಇದೆ. ಎಲ್ಲವನ್ನು ಹಂತ ಹಂತವಾಗಿ ನೋಡಿಕೊಂಡು ಮಾಡುತ್ತಾರೆ. ಮದ್ಯಂದಗಡಿಯ ಕುರಿತು ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ. ವಿರೋಧ ಪಕ್ಷದವರು ಗೃಹ ಲಕ್ಷ್ಮೀ ಯೋಜನೆಯಡಿ ಹಣ ಬಂದಿಲ್ವಾ ಅದರ ಬಗ್ಗೆ ಹೇಳಲಿ. ಶಕ್ತಿ ಯೋಜನೆಗೆ ಬಸ್ ಗಳನ್ನು ಖರೀದಿ ಮಾಡುತ್ತಿದ್ದೆವೆ. ವಿರೋಧ ಪಕ್ಷದವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದವರಿಗೆ ನಾನು ಮನವಿ ಮಾಡುತ್ತೇನೆ. ನೀವು ನಮಗೆ ಸಲಹೆ ಹಾಗೂ ಸಹಕಾರ ನೀಡಿ. ನೀವು ಆಡಳಿತ ಮಾಡಿದವರು, ನೀವು ಹೀಗೆಲ್ಲಾ ಮಾತನಾಡಬಾರದು. ಕಾವೇರಿ ವಿಚಾರದಲ್ಲಿ ನಮ್ಮ ತಂದೆಯವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಆ ಭಾಗದ ಜನರ ಹೃದಯದಲ್ಲಿ ನಮ್ಮ ತಂದೆಯವರು ಇದ್ದಾರೆ. ಅದನ್ನು ಯಾರು ಕಲ್ಮಶ ಮಾಡಲು ಆಗಲ್ಲ ಎಂದರು.

ಸ್ಮಾರ್ಟ್ ಸಿಟಿ ಸೇರಿದಂತೆ ಇತರೆ ಕಾಮಗಾರಿಗಳ ಕುರಿತು ತನಿಖೆಗೆ ಆದೇಶ ನೀಡಿದಕ್ಕೆ ಈಶ್ವರಪ್ಪನವರು ಗುತ್ತಿಗೆದಾರರು ಮಧು ಬಂಗಾರಪ್ಪನವರ ಮನೆ ಬಾಗಿಲಿಗೆ ಬರಲಿ ಎಂದು ಆದೇಶ ಮಾಡಿದ್ದಾರೆ ಎಂಬ ಹೇಳಿಕೆಗೆಗೆ ಗರಂ ಆದ ಸಚಿವರು, ಗುತ್ತಿಗೆದಾರರು ಈಶ್ವರಪ್ಪನವರ ಮನೆ ಬಾಗಿಲಿಗೆ ಹೋಗಿದ್ರಾ ಎಂದು ಪ್ರಶ್ನಿಸಿದರು.

Join Whatsapp