ಜನತಾ ದರ್ಶನ ಕಾರ್ಯಕ್ರಮ ಸಿಎಂ ಸಿದ್ದರಾಮಯ್ಯರ ದಿಟ್ಟ ಹೆಜ್ಜೆ: ಸಚಿವ ಮಧು ಬಂಗಾರಪ್ಪ

Prasthutha|

ಶಿವಮೊಗ್ಗ: ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಜನತಾ ದರ್ಶನ ಕಾರ್ಯಕ್ರಮ ಸುಲಭವಾಗುತ್ತದೆ. ಇದು ಸಿಎಂ ಸಿದ್ದರಾಮಯ್ಯ ಅವರ ದಿಟ್ಟ ಹೆಜ್ಜೆಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

- Advertisement -

ಇಂದು ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ ಆಯೊಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಇದು ನನಗೆ ಹೊಸ ಕಾರ್ಯಕ್ರಮವಲ್ಲ. ಸಿದ್ದರಾಮಯ್ಯನವರು ಹಿಂದೆ ಸಿಎಂ ಆಗಿದ್ದಾಗ, ಅಧಿಕಾರಿಗಳೇ ನಿಮ್ಮಲ್ಲಿಗೆ ಅಂತ ಒಂದು ಕಾರ್ಯಕ್ರಮ ಮಾಡಿದ್ದರು. ಇದನ್ನು ನಾನು ಸೊರಬದಲ್ಲಿ ನಡೆಸಿದ್ದೇನೆ. ಅಧಿಕಾರಿಗಳು ತಾಲೂಕು ಮಟ್ಟಕ್ಕೆ ಹೋಗಬೇಕೆಂಬ ಕಾರ್ಯಕ್ರಮ ನಡೆಸಿದ್ದರು. ಇಂದಿನ ಜನತಾ ದರ್ಶನ ಅದರ ಮುಂದುವರೆದ ಕಾರ್ಯಕ್ರಮವಾಗಿದೆ ಎಂದರು.

- Advertisement -

ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಸಿದಾಗ ಜನರ ಸಮಸ್ಯೆಗಳನ್ನು ಅಲಿಸಲು ಸುಲಭವಾಗುತ್ತದೆ. ಇದು ಅಹವಾಲು ತೆಗೆದುಕೊಳ್ಳುವುದು ಅಷ್ಟೆ ಅಲ್ಲ, ಅಹವಾಲಿಗೆ ಕಾನೂನು ಬದ್ದವಾಗಿ ಉತ್ತರ ನೀಡುವುದು ಮುಖ್ಯವಾಗುತ್ತದೆ. ರಾಜ್ಯದಲ್ಲಿ ಬಹಳ ಮುಖ್ಯವಾಗಿ ನಡೆಸಲಾಗುತ್ತದೆ. ಇದನ್ನು ಸಿಎಂ ರವರ ಆದೇಶದಂತೆ ನಡೆಸಲಾಗುತ್ತಿದೆ. ರಾಜ್ಯದ ಎಲ್ಲೆಡೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಮುಂದೆ ಶಾಸಕರುಗಳು ಸಹ ನಡೆಸಬಹುದು. ಅಧಿಕಾರಿಗಳು ಸಹ ಅಲ್ಲಿಗೆ ಹೋದಾಗ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಆಡಳಿತದ ಮೇಲೆ ಹಿಡಿತ ಸಾಧಿಸಲು ಇದು ಸಹಕಾರವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ತಿಂಗಳಿಗೆ ಒಂದು ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಜನರ ಬಳಿ ಹೋದಾಗ ಆಡಳಿತ ಹಿಡಿತಕ್ಕೆ ಬಂದ ಹಾಗೆ ಆಗುತ್ತದೆ. ಸಾಮಾನ್ಯ ಜನರಿಗೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಅನ್ನಿಸಬೇಕು. ಕಾನೂನು ಬದ್ಧವಾಗಿ, ಕಾನೂನು ಮೀರಿ ನಡೆಯಬೇಕು ಅನ್ನಿಸಿದಾಗ ಅದು ಕುಳಿತುಕೊಂಡು ಪರಿಹರಿಸಲು ಸಹಕಾರಿ ಆಗತ್ತದೆ. ಇದು ಒಳ್ಳೆಯ ಕೆಲಸ ಇದು ಎಲ್ಲಾ ಕಡೆ ಆಗಬೇಕಿದೆ. ಇದು ನನಗೆ ಇಷ್ಟವಾದ ಕಾರ್ಯಕ್ರಮ ಎಂದರು.

ಈಗ ಬರುವ ಸಮಸ್ಯೆಗಳಿಗೆ ಏನು ಪರಿಹಾರ ಸಿಗಬಹುದು‌ ಎಂದು ತಿಳಿಯಲು ಸಹಕಾರಿ ಆಗುತ್ತದೆ. ರಾಜ್ಯದಲ್ಲಿ ಅಧಿಕಾರ ಬದಲಾಗಿದೆ. ಈಗ ಇಂತಹ ಕಾರ್ಯಕ್ರಮಗಳಿಂದ ಅವರ ಆಡಳಿತದ ಬಗ್ಗೆ ತಿಳಿಯಲು ಸಹಾಯಕವಾಗುತ್ತದೆ. ಇದರಿಂದ ನಾವು ಹಿಂದಿನ ಸರ್ಕಾರದ ರೀತಿ ಮಾಡಿಕೊಳ್ಳಬಾರದು ಎಂದು ತಿಳಿಯಲು ಸಹಕಾರಿ ಆಗುತ್ತದೆ. ಆಡಳಿತದ ಮೇಲೆ ಹಿಡಿತ ತರಲು ಇದು ಬೇಕು ಎಂದು ಸಿಎಂಗೆ ಅನ್ನಿಸಿರಬಹುದು. ಇದರಿಂದ ಇಂತಹ ದಿಟ್ಟ ಹೆಜ್ಜೆಯನ್ನಿಟ್ಟು ಸಿಎಂ ಸಿದ್ದರಾಮಯ್ಯ ಅವರು ಇಟ್ಟಿದ್ದಾರೆ. ಈಗ ನಮಗೆ ಮತ ಹಾಕಿ ಕಳುಹಿಸಿದವರು ಸಾಮಾನ್ಯ ಜನರು. ಇದರಿಂದ ಸಾಮಾನ್ಯ ಜನರ ಜೊತೆಗೆ ಇದ್ದರೆ ಆಡಳಿತ ಸಹಜವಾಗಿಯೇ ಸರಿ ಆಗುತ್ತದೆ. ಅಲ್ಲದೆ ಅಧಿಕಾರಿ ವರ್ಗದವರು ಸಹ ಸರಿಯಾಗಿ ಕೆಲಸ ಮಾಡಲು ಸಹಕಾರಿ ಆಗುತ್ತದೆ ಎಂದರು.

ಸೊರಬದಲ್ಲಿ ಆಗುವ ಕೆಲಸಕ್ಕೆ ಶಿವಮೊಗ್ಗಕ್ಕೆ ಜನರು ಬರುತ್ತಾರೆ. ಅಧಿಕಾರಿಗಳ ಮಟ್ಟದಲ್ಲಿಯೇ ಆಗುವ ಕೆಲಸವನ್ನು ಜಿಲ್ಲಾ ಮಟ್ಟಕ್ಕೆ ತರುತ್ತಾರೆ. ಸಮಸ್ಯೆಗಳು ನಮ್ಮ ಮುಂದೆ ಬಂದಾಗ ಅದನ್ನು ಹೇಗೆ ಹಿಡಿತದಲ್ಲಿ ತರಬೇಕು ಎಂದು ಗೂತ್ತಾಗುತ್ತದೆ. ನಮಗೆ ಸಮಸ್ಯೆಗಳೆ ಗೂತ್ತಾಗದೆ ಹೋದಾಗ ಸುಮ್ಮನೆ ಊರುಗಳು ಸುತ್ತಿ ಏನ್ ಪ್ರಯೋಜನ ಎಂದರು. ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಒಂದು ವೇದಿಕೆಯಾಗಲಿದೆ ಎಂದರು.

ಶಾಲೆಗಳ ಜೋಡಣೆಯ ಕುರಿತು ಮುಂದಿನ ವರ್ಷದಲ್ಲಿ ಅದರ ಫಲಿತಾಂಶ ಬರಲಿದೆ. ಈಗ ಒಂದು ಹಂತಕ್ಕೆ ಬರುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನ ಹಾಗೂ ನನ್ನ ಆಸೆಯು ಸಹ ಇದೆ. ಅದು ಬರುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ, ಸಿಇಓ ಸ್ನೇಹಲ್ ಲೋಖಂಡೆ ಸುಧಾಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp