►ವರ್ಗಾವಣೆಗೊಂಡ ಪಣಂಬೂರು, ಬಜ್ಪೆ, ಕದ್ರಿ ಠಾಣೆಯ ಅಧಿಕಾರಿಗಳು
ಬೆಂಗಳೂರು: ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಲಂಚ ಪಡೆಯುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪದ ಕಾವು ಆರುವ ಮುನ್ನವೇ ಸರ್ಕಾರ ಇದೀಗ ಮತ್ತೆ 21 ಜನ ಡಿವೈಎಸ್‌ಪಿ ಮತ್ತು 64 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಇನ್ನು ಬಜ್ಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಿರಂಜನ್ ಕುಮಾರ್ ಅವರನ್ನು ಸಕಲೇಶಪುರ ಗ್ರಾಮಾಂತರ ವೃತ್ತಕ್ಕೆ, ಐಎಸ್‌ಡಿಯಲ್ಲಿದ್ದ ಸಂದೇಶ್ ಪಿಜಿ ಅವರನ್ನು ಮೂಡುಬಿದಿರೆ ಠಾಣೆಗೆ, ಡಿಸಿಆರ್‌ಇ ಯಲ್ಲಿದ್ದ ಅಝ್ಮತ್ ಅಲಿ ಅವರನ್ನು ಬಜ್ಪೆ ಠಾಣೆಗೆ, ಸಿಟಿ ಎಸ್‌ಬಿಯಲ್ಲಿದ್ದ ಮುಹಮ್ಮದ್ ಶರೀಫ್ ಅವರನ್ನು ಮಂಗಳೂರು ಸಂಚಾರ ಉತ್ತರ, ಪಣಂಬೂರಿನ ಸೋಮಶೇಖರ್ ಅವರನ್ನು ಕದ್ರಿ ಠಾಣೆಗೆ, ಕದ್ರಿಯ ಅನಂತ ಪದ್ಮನಾಭ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.
ವರ್ಗಾವಣೆಗೊಂಡ ಇನ್ಸ್’ಪೆಕ್ಟರ್ಗಳು
ವರ್ಗಾವಣೆಗೊಂಡ ಡಿವೈಎಸ್ಪಿಗಳು
ಈ ತಿಂಗಳ ಮೊದಲ ದಿನ ಆಗಸ್ಟ್ 01 ರಂದು ರಾಜ್ಯ ಸರ್ಕಾರ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನು ಸರ್ಕಾರ ಆಗಸ್ಟ್ 02 ರಂದು ಬೆಳಗ್ಗೆ ಏಕಾಏಕಿ ತಡೆ ಹಿಡಿದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ 66 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ.