ಬೆಂಗಳೂರಿನ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್‌ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ: ಮಿಸ್ಟರ್ ಯೂನಿರ್ವಸ್ ಸ್ಪರ್ಧೆಗೆ ನಾಮನಿರ್ದೇಶನ

Prasthutha|

ಬೆಂಗಳೂರು: ಗೋವಾದಲ್ಲಿ ನಡೆದ ಮಿಸ್ಟರ್ ಇಂಡಿಯಾ 2023 ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್‌ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ ದೊರಕಿದೆ.

- Advertisement -

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮೂಲತಃ ಗೂರ್ಖಾ ಸಮುದಾಯದ ಬಾದಲ್ ಬಿಸ್ತಾ ಅವರು ಶಿವರಾಜ್ ಧನ್ ಮತ್ತು ಲಕ್ಷ್ಮಿ ಬಿಸ್ತಾ ಅವರ ಪುತ್ರನಾಗಿದ್ದು, ಬಾಲ್ಯದಿಂದಲೂ ಮಾಡಲಿಂಗ್, ನಟನಾ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಜಮ್ಯಾಸ್ಟಿಕ್, ಶಾವೊಲಿನ್, ಚು-ಕುಂಗ್ಪು, ವುತು, ಟೇಕ್ವಾಂಡೋ, ನಟನೆ ಮತ್ತು ನೃತ್ಯವನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗೂರ್ಖಾ ಸಮುದಾಯದ ಅಧ್ಯಕ್ಷ ಆರ್.ಜೋಗ್‌ಮಲ್. ಈ ಗೆಲುವಿನಿಂದ ಬಾದಲ್ ಬಿಸ್ಟ್ ರುಬರು ಇದೇ ಅಕ್ಟೋಬರ್ 3 ರಿಂದ 8 ರ ವರೆಗೆ ಅಮೆರಿಕದಲ್ಲಿ ನಡೆಯಲಿರುವ  ಮಿಸ್ಟರ್‌ ಯೂನಿವರ್ಸ್ ಇಂಟರ್ನ್ಯಾಷನಲ್ ಸ್ಪರ್ಧೆಗೆ ನಾಮನಿರ್ದೇಶನಗೊಂಡಿದ್ದಾರೆ. ಮಿಸ್ಟರ್ ಕರ್ನಾಟಕ 2022 ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬಾದಲ್ ಬಿಸ್ಟ್ ವಿಶ್ವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಸರ್ಕಾರ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದಾರೆ.

Join Whatsapp