ಕರ್ನಾಟಕ: 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ

Prasthutha|

- Advertisement -

ಬೆಂಗಳೂರು: ಕರ್ನಾಟಕದ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಜೂನ್ 3 ರಂದು ಚುನಾವಣೆ ನಡೆಯಲಿದೆ. ಮೇ 17ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಲಕ್ಷಣ ಸವದಿ, ಲೆಹರ್‌ ಸಿಂಗ್‌ ಕಾಂಗ್ರೆಸ್‌ನ ಆರ್‌ಬಿ ತಿಮ್ಮಾಪೂರ್‌, ಅಲ್ಲಂ ವೀರಭದ್ರಪ್ಪ , ವೀಣಾ ಅಚ್ಚಯ್ಯ ಮತ್ತು ಜೆಡಿಎಸ್‌ನ ರಮೇಶ್‌ ಗೌಡ, ನಾರಾಯಣ ಸ್ವಾಮಿ ಅವರ ಅವಧಿ ಜೂನ್‌ 14ಕ್ಕೆ ಕೊನೆಯಾಗಲಿದೆ.

- Advertisement -

ಇನ್ನು ಈ ಚುನಾವಣೆಯಲ್ಲಿ ಬಿಜೆಪಿಯ 4, ಕಾಂಗ್ರೆಸ್‌ನ 2, ಜೆಡಿಎಸ್‌ನ ಒಬ್ಬರು ಸದಸ್ಯರು ಆಯ್ಕೆಯಾಗುವ ಸಾಧ್ಯತೆಯಿದೆ. ವಿಧಾನಸಭೆಯ 225 ಸದಸ್ಯರು ಮತದಾನ ಮಾಡಲಿದ್ದಾರೆ.

Join Whatsapp