ಅಸ್ಸಾಂ ಪೊಲೀಸರಿಗೆ ಪ್ರೆಸಿಡೆಂಟ್ ಕಲರ್ ಅವಾರ್ಡ್ ಅರ್ಪಿಸಿದ ಅಮಿತ್ ಶಾ

Prasthutha|

ಅಸ್ಸಾಂ : ಕಳೆದ 25 ವರ್ಷಗಳಲ್ಲಿ ಅಸ್ಸಾಂ ಪೊಲೀಸರ ಅನುಕರಣೀಯ ಸೇವೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರೆಸಿಡೆಂಟ್ ಕಲರ್ ಅವಾರ್ಡ್ ಅನ್ನು  ಅಸ್ಸಾಂ ಪೊಲೀಸರಿಗೆ ನೀಡಿದರು

- Advertisement -

ಅಸ್ಸಾಂನ ನಕ್ಷೆ, ರಾಜ್ಯದ ಜಿಲ್ಲೆಗಳನ್ನು ಪ್ರತಿನಿಧಿಸುವ 36 ನಕ್ಷತ್ರಗಳು, ಒಂದು ಕೊಂಬಿನ ಖಡ್ಗಮೃಗ ಮತ್ತು ಅಸ್ಸಾಂ ಪೊಲೀಸರ ಲಾಂಛನದೊಂದಿಗೆ ಧ್ವಜವನ್ನು ರೂಪಿಸಲಾಗಿದ್ದು ಅಸ್ಸಾಂ ಶಾಂತಿ ಮತ್ತು ಯುದ್ಧ ಎರಡರಲ್ಲೂ ರಾಷ್ಟ್ರಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಿ ಮಿಲಿಟರಿ ಅಥವಾ ಪೊಲೀಸ್ ಘಟಕಕ್ಕೆ ನೀಡಲಾಗುವ ಅತ್ಯುನ್ನತ ಗೌರವವಾದ ಪ್ರೆಸಿಡೆಂಟ್ ಕಲರ್ ಅವಾರ್ಡ್ ಪಡೆದ ದೇಶದ 10 ನೇ ರಾಜ್ಯವಾಗಿದೆ.

ಗುವಾಹಟಿಯಲ್ಲಿ ನಡೆದ ‘ಅಲಂಕರನ್ ಪರೇಡ್’ ಸಮಾರಂಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಾಂತ ಅವರ ಉಪಸ್ಥಿತಿಯಲ್ಲಿ ಅಮಿತ್ ಶಾ ಅವರು ರಾಜ್ಯ ಪೊಲೀಸರಿಗೆ ಈ ಗೌರವವನ್ನು ನೀಡಿದರು.

Join Whatsapp