ಪ್ರಯಾಣಿಕರಿಗೆ ಬಿಗ್ ಶಾಕ್: ಆಟೋ ಪ್ರಯಾಣ ದರ ಹೆಚ್ಚಳ !

Prasthutha|

ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ಬಾಡಿಗೆ ದರಪರಿಷ್ಕರಣೆ ಮಾಡಿದ್ದು, ನಗರದಲ್ಲಿ ಇನ್ನೂ ಮುಂದೆ ಮೀಟರ್ ದರವನ್ನು ಕನಿಷ್ಠ 30 ರೂ.ಗಳಿಗೆ ಹೆಚ್ಚಿಸಲಾಗಿದೆ. ನಂತರ ಪ್ರತಿ ಕಿಲೋಮೀಟರ್ 15 ರೂ. ಗಳಂತೆ ಹಾಗೂ ಆಟೋ ಕಾಯುವಿಕೆ ದರವನ್ನು ಮೊದಲ ಐದು ನಿಮಿಷಕ್ಕೆ ಉಚಿತ, ನಂತರ 15 ನಿಮಿಷಕ್ಕೆ 5 ರೂ.ಗಳಂತೆ ನಿಗದಿಗೊಳಿಸಲಾಗಿದೆ.

- Advertisement -

ಆಟೋದಲ್ಲಿ 20 ಕೆ.ಜಿ.ಗೂ ಮೇಲ್ಪಟ್ಟ ಲಗೇಜುಗಳಿಗೆ 5 ರೂ. ಬಾಡಿಗೆ ನೀಡಬೇಕಾಗಿದ್ದು. 50 ಕೆ.ಜಿ. ವರೆಗೆ ಮಾತ್ರ ಲಗೇಜು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಒಂದೂವರೆ ಪಟ್ಟು ಹೆಚ್ಚು ದರ ನಿಗದಿಗೊಳಿಸಲಾಗಿದೆ.

ಪರಿಷ್ಕೃತ ದರಗಳ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು  ಪರಿಷ್ಕೃತ ದರಗಳ ಮೀಟರ್ ನಲ್ಲಿ ಪ್ರದರ್ಶನವಾಗುವಂತೆ ಮೀಟರ್ ಗಳನ್ನು ಫೆ.28, 2022 ರೊಳಗಾಗಿ ಸತ್ಯಾಪನೆಗೊಳಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp