ವಿಶ್ವದ ‘100 ಪ್ರಭಾವಶಾಲಿ ಮಹಿಳೆ’ಯರಲ್ಲಿ ಒಬ್ಬರಾಗಿದ್ದ ಬಲೂಚಿಸ್ತಾನ ವಿಮೋಚನೆ ಹೋರಾಟಗಾರ್ತಿ ಕರೀಮಾ ಬಲೂಚ್ ನಿಗೂಢ ಸಾವು

Prasthutha|

ಕೆನಡಾ : ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಖ್ಯಾತ ಹೋರಾಟಗಾರ್ತಿ ಕರೀಮಾ ಬಲೂಚ್ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. 2016ರಲ್ಲಿ ಪಾಕಿಸ್ತಾನ ತ್ಯಜಿಸಿ ಅವರು ಕೆನಡಾದಲ್ಲಿ ಆಶ್ರಯ ಪಡೆದಿದ್ದರು.

ಕೆನಡಾದ ಹಾರ್ಬರ್ ಫ್ರಂಟ್ ನಲ್ಲಿ ಕರೀಮಾ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಟೊರೊಂಟೊ ಲೇಕ್ ಶೋರ್ ನ ಬಳಿಯಲ್ಲಿರುವ ದ್ವೀಪದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

- Advertisement -

ಮೃತ ದೇಹ ಪೊಲೀಸರ ವಶದಲ್ಲಿದ್ದು, ಅದನ್ನು ಅವರ ಪತಿ ಹಮ್ಮಾಲ್ ಹೈದರ್ ಹಾಗೂ ಸಹೋದರ ಗುರುತಿಸಿದ್ದಾರೆ.

ಕರೀಮಾ ಸಾವಿನ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ತನಿಖೆ ನಡೆಸಬೇಕೆಂದು ಟೊರೊಂಟೊ ಪೊಲೀಸರು ಹಾಗೂ ಕೆನಡಾ ಭದ್ರತಾ ಏಜೆನ್ಸಿಯನ್ನು ಹಿರಿಯ ಪತ್ರಕರ್ತ ತಾರೇಕ್ ಫತಾಹ್ ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಸರಕಾರದ ದೌರ್ಜನ್ಯ ವಿರುದ್ಧ ಕರೀಮಾ ಧ್ವನಿ ಎತ್ತಿದ್ದರು. 2016ರಲ್ಲಿ ಅವರು ವಿಶ್ವದ 100 ಅತ್ಯಂತ ಸ್ಫೂರ್ತಿದಾಯಕ ಮತ್ತು ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬಿಬಿಸಿ ಗುರುತಿಸಿತ್ತು.

ಸ್ವಿಝರ್ ಲ್ಯಾಂಡ್ ನಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಕರೀಮಾ ಬಲೂಚಿಸ್ತಾನದ ಕುರಿತು ಭಾಷಣ ಮಾಡಿ ಗಮನ ಸೆಳೆದಿದ್ದರು.

- Advertisement -