ಶನಿವಾರಸಂತೆ | ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿದ ಕರವೇ ಕಾರ್ಯಕರ್ತರು

Prasthutha|

ಶನಿವಾರಸಂತೆ: ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿದ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಆಕೆಯನ್ನು ಬೆಂಗಳೂರಿನ ಆಟೋರಾಜ ಫೌಂಡೇಷನ್ಗೆ್ ಸೇರಿಸಿ ಮಾನಮೀಯ ಮೆರೆದಿದ್ದಾರೆ.

- Advertisement -


ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಕೆಲವು ದಿನಗಳಿಂದ ಅನಾಥರಾಗಿ ತಿರುಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಶನಿವಾರಸಂತೆ ಠಾಣೆಯ ಸಿಬ್ಬಂದಿ ಸಿದ್ದಯ್ಯ ಶಿವರಾಮೇಗೌಡರ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರಿಗೆ ಮಾಹಿತಿ ನೀಡಿದ್ದರು.


ಕರವೇ ಕಾರ್ಯಕರ್ತರು ಶನಿವಾರಸಂತೆ ಪೊಲೀಸ್ ಠಾಣೆಯಿಂದ ಅನುಮತಿ ಪತ್ರ ತೆಗೆದುಕೊಂಡ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮೂಲಕ ಬೆಂಗಳೂರಿನ ಆಟೋ ರಾಜ ಫೌಂಡೇಶನ್ ಗೆ ಪತ್ರ ಕಳುಹಿಸಿದರು. ನಂತರ ಕೊಡ್ಲಿಪೇಟೆ ಆರೋಗ್ಯ ಇಲಾಖೆ ಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ ಕರವೇ ಕಾರ್ಯಕರ್ತರು ಖುದ್ದಾಗಿ ಬೆಂಗಳೂರಿನ ಆಟೋರಾಜ ಫೌಂಡೇಶನಿಗೆ ಸೇರಿಸಿ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾರೆ.

- Advertisement -


ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ ಒಪ್ಪಿಕೊಂಡ ಆಟೋ ರಾಜ ಫೌಂಡೇಶನ್ ಗೆ ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ಕೆ ಸಹಕಾರ ನೀಡಿದ ಶನಿವಾರಸಂತೆ ಪೊಲೀಸ್ ಠಾಣೆಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ, ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.



Join Whatsapp