ಉಪ್ಪಿನಂಗಡಿ: ಫಾಸ್ಟ್ ಫುಡ್ ಅಂಗಡಿ ಮಾಲಕನಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು !

Prasthutha|

ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳ ತಂಡವೊಂದು ಫಾಸ್ಟ್ ಫುಡ್ ಅಂಗಡಿಯೊಂದರ ಮಾಲಕನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ಕಳೆದ ರಾತ್ರಿ ನಡೆದಿದೆ.

- Advertisement -

ಆದರ್ಶ ನಗರದ ಬಾತೀಶ್ ಹಲ್ಲೆಗೊಳಗಾದ ಫಾಸ್ಟ್ ಫುಡ್ ಅಂಗಡಿ ಮಾಲಕ ಎಂದು ಗುರುತಿಸಲಾಗಿದೆ.

ಇವರು ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ನಿನ್ನೆ ರಾತ್ರಿ ಇನೋವಾ ಹಾಗೂ ರಿಡ್ಝ್ ಕಾರಿನಲ್ಲಿ ಬಂದ ನಾಲ್ವರು ಕ್ಷುಲ್ಲಕ ವಿಚಾರದಲ್ಲಿ ಬಾತೀಶ್ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

- Advertisement -

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp