ಕನ್ಹಯ್ಯಾ ಲಾಲ್ ಕುಟುಂಬಕ್ಕೆ 1.70 ಕೋಟಿ ದೇಣಿಗೆ ಸಂಗ್ರಹಿಸಿದ ಕಪಿಲ್ ಮಿಶ್ರಾ
Prasthutha: July 2, 2022

ಜೈಪುರ್ : ರಾಜಸ್ತಾನದ ಉದಯಪುರದಲ್ಲಿ ಹತ್ಯೆಗೀಡಾದ ಟೈಲರ್ ಕನ್ಹಯ್ಯಾ ಲಾಲ್ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಸುಮಾರು 1.70 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದಾರೆ.
1.70 ಕೋಟಿಯಲ್ಲಿ, 1 ಕೋಟಿಯಷ್ಟು ಹಣವನ್ನು ಕನ್ಹಯ್ಯಾ ಲಾಲ್ ಅವರ ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆಯ ಸಾಲ ತೀರಿಸಲು ನೀಡಲಾಗುವುದು. ಉಳಿದ ಹಣಗಳನ್ನು ಹಲ್ಲೆಗೊಳಗಾದ, ಕೊಲೆಗೀಡಾದವರನ್ನು ನಾವು ಗುರುತಿಸಿದ್ದು ನೆರವಿನ ರೂಪದಲ್ಲಿ ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.
ಒಂದು ಕೋಟಿಯ ಗುರಿಯನ್ನು ಹೊಂದಿದ್ದೆವು. ಆದರೆ 70 ಲಕ್ಷ ಹೆಚ್ಚಿನ ದುಡ್ಡು ನಮಗೆ ಸಂಗ್ರಹವಾಗಿದೆ. ಇದು ನಮಗೆ ಸಂತಸ ತಂದಿದೆ ಎಂದಿದ್ದಾರೆ
ಕನ್ಹಯ್ಯಾ ಕುಟುಂಬವನ್ನು ಭೇಟಿ ಮಾಡಿ, ಅವರನ್ನು ಸಂತೈಸಿ ಈ ದೇಣಿಗೆಯನ್ನು ನೀಡಿದ್ದಾರೆ.
