ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ: ಆಗಸ್ಟ್ 15 ರಿಂದ ಕೈಗೆಟುವ ದರದಲ್ಲಿ ಲಭ್ಯ

Prasthutha|

ಬೆಂಗಳೂರು; ಗ್ರೀನ್ ವೆಹಿಕಲ್ ಎಕ್ಸ್ ಪೋ ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಆಟೋ ಗಮನ ಸೆಳೆಯುತ್ತಿದ್ದು, ಆಗಸ್ಟ್ 15 ಕ್ಕೆ ಇವು ರಸ್ತೆಗಿಳಿಯಲಿವೆ. ಇಂದು ಪರಿಸರ ಸ್ನೇಹಿ ಆಟೋಗಳನ್ನು ಲೋಕಾರ್ಪಣೆ ಮಾಡಲಾಗಿದೆ.

- Advertisement -

ಡಿ.ಎಸ್.ಆರ್.ಬ್ಯಾಟರಿ ಚಾಲಿತ ಮೋಟಾರ್ ವಾಹನಗಳ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಓ. ಧನಶೇಖರ್ ರೆಡ್ಡಿ, ಕಂಪೆನಿಯ ತಾಂತ್ರಿಕ ವರ್ಗದ ಜಯಸೂರ್ಯ, ರಾಕೇಶ್ ಶರ್ಮಾ ಮಾಹಿತಿ ನೀಡಿದರು. ಬ್ಯಾಟರಿ ಚಾಲಿತ ಆಟೋ ನಗರ ಪ್ರದೇಶದಲ್ಲಿ ಮಾಲೀನ್ಯ ರಹಿತವಾಗಿ ಕಾರ್ಯನಿರ್ವಹಿಸಲಿದೆ. ಡಿಎಸ್ ಆರ್ ವಿ ಎಲೆಕ್ಟ್ರಾನಿಕಲ್ ಮೊಬಿಲಿಟಿ ಆಟೋಗಳು ಆಗಸ್ಟ್ ನಲ್ಲಿ 15ಕ್ಕೆ ರಸ್ತೆಗಳಿವೆ. ಇದಕ್ಕಾಗಿ 120ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್ ಗಳನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಪ್ರದೇಶಗಳಲ್ಲಿ ಅಳವಡಿಸಲಾಗುತ್ತಿದೆ. ಬ್ಯಾಟರಿ ಬದಲಾಯಿಸುವ ಕೇಂದ್ರ ಹಾಗೂ ಚಾರ್ಜಿಂಗ್   ಪಾಯಿಂಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

 ಡಿ.ಎಸ್.ಆರ್.ಇ.ವಿ.ಮೊಬಿಲಿಟಿ ಬಲವಾದ, ಸುರಕ್ಷಿತ ಮತ್ತು ಆರ್ಥಿಕವಾಗಿ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ವಿಶ್ವಾಸಾರ್ಹ ತಂಡವಾಗಿದೆ.  ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಭಾರತದಲ್ಲಿ ಮಾಲಿನ್ಯ ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮುತ್ತಿದೆ. ಪರಿಸರವನ್ನು ಮಾಲಿನ್ಯದಿಂದ ರಕ್ಷಿಸಲು, ಅದನ್ನು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದನ್ನು ಮನಗಂಡು ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳನ್ನು ತಯಾರಿಸಿ ಸುರಕ್ಷಿತ ಮತ್ತು ಕೈಗೆಟುಕುವ ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

- Advertisement -

ದ್ವಿಚಕ್ರವಾಹನ ಶ್ರೇಣಿಯಲ್ಲಿ ಡಿಎಸ್‌ ಆರ್ ಲಿಯೋ, ಡಿಎಸ್ ಎಆರ್ ಥಿಲ್, ಡಿಎಸ್‌ ಆರ್ ರಾಂಬೊ ಮತ್ತು ಡಿಎಸ್‌ ಆರ್‌ ರೋಡಿಂಗ್‌ ಅನ್ನು ಆರಿಸಿಕೊಳ್ಳಬಹುದಾಗಿದೆ. ಈ ಎಲ್ಲಾ ವಾಹನಗಳು ಮತ್ತು ಸುಗಮ ಸವಾರಿಯನ್ನು ನೀಡಲು ಇವುಗಳನ್ನು ತಯಾರಿಸಲಾಗಿದೆ. ಮೂರು-ಚಕ್ರ ವಾಹನಗಳ ಶ್ರೇಣಿಗಾಗಿ ಡಿ.ಎಸ್.ಆರ್ ಎಲ್ 5ಎಂ ಮತ್ತು ಡಿಎಸ್ ಆರ್ ಲೋಡಿಂಗ್ ಅನ್ನು ಆಯ್ಕೆ ಮಾಡಬಹುದು ಎರಡೂ ಈ ಉತ್ಪನ್ನಗಳು ತುಂಬಾ ಸುರಕ್ಷಿತ ಮತ್ತು ಸುಲಭದರಲ್ಲಿ ದೊರೆಯುತ್ತದೆ ಎಂದು ಹೇಳಿದರು.

Join Whatsapp