ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟಿಗೆ ಹಚ್ಚಿ ಸಾಗಾಟ: ವ್ಯಕ್ತಿಯ ಬಂಧನ

Prasthutha|

ಕಣ್ಣೂರು: ಕೇರಳದ ಕಣ್ಣೂರು ಏರ್​ ಪೋರ್ಟ್​ ನಲ್ಲಿ ಪ್ರಯಾಣಿಕನೋರ್ವನಿಂದ ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ 302 ಗ್ರಾಂ ಚಿನ್ನವನ್ನು ವಶವಡಿಸಿಕೊಂಡಿದ್ದಾರೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಆತ ಜೀನ್ಸ್ ಪ್ಯಾಂಟ್ ​ಗೆ ಹಚ್ಚಿದ್ದ. ನೋಡಲು ಹಳದಿ ಬಣ್ಣದ ಪೇಂಟ್ ​ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್ ಅನ್ನು ಹಚ್ಚಿಕೊಂಡಿದ್ದ ಎಂದು ತಿಳಿದು ಬಂದಿದೆ.

- Advertisement -