ಕರ್ನಾಟಕ ಬಂದ್| ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ: ಪೂಜಾ ಗಾಂಧಿ

Prasthutha|

ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಸ್ಯಾರ್ ಗಳು ಸಹ ಬೆಂಬಲ ಸೂಚಿಸಿದ್ದಾರೆ.

- Advertisement -


ಈ ವೇಳೆ ನಟಿ ಪೂಜಾ ಗಾಂಧಿ ಕೂಡ ಭಾಗಿಯಾಗಿ ಕನ್ನಡಿಗರ ಸಹನೆ ಮತ್ತು ತಾಳ್ಮೆಯ ಬಗ್ಗೆ ಶ್ಲಾಘಿಸಿದ್ದಾರೆ. ಕಾವೇರಿ ನಮ್ಮವಳು ಎಂದು ಹೇಳುವ ಮೂಲಕ ನಟಿ ಸಾಥ್ ನೀಡಿದ್ದಾರೆ.

ಎರಡು ರಾಜ್ಯಕ್ಕೂ ಒಳ್ಳೆಯದಾಗಲಿ. ಕನ್ನಡಿಗರಿಗೆ ನಿಜವಾಗಲೂ ಸಹನೆಯಿದೆ. ಆದರೆ ಈ ವಿಚಾರವಾಗಿ ಜಾಸ್ತಿ ಸಹನೆ ತಗೋಬೇಡಿ ಎಂದು ಕೇಳಿಕೇಳುತ್ತೇನೆ ಎಂದು ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಇವತ್ತು ಕರ್ನಾಟಕ್ಕೆ ಯಾವು ಸಂದರ್ಭ ಕ್ರಿಯೇಟ್ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಇಬ್ಬರು ಅಹಂ ಮತ್ತು ಅಸೂಯೆ ಬಿಟ್ಟು ಕಾವೇರಿ ವಿಚಾರ ಬಗ್ಗೆ ಚರ್ಚೆ ಮಾಡಬೇಕು. ಮೇಕೆದಾಟು ಯೋಜನೆ ಬಗ್ಗೆ ಕೂಡ ಗಮನ ಕೊಡಬೇಕು ಎಂದರು. ಕಾವೇರಿಯ ಒಂದು ಹನಿ ನೀರು ತಮಿಳುನಾಡಿಗೆ ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ. ಇಡೀ ಚಿತ್ರರಂಗ ನಮ್ಮ ಭಾಷೆ, ನೆಲ, ಜಲ ವಿಚಾರ ಬಂದಾಗ ನಮ್ಮ ಜನರಿಗೋಸ್ಕರ ಹೋರಾಟ ಮಾಡುತ್ತೇವೆ ಎಂದರು.

Join Whatsapp