ಶಾಸಕ ಸುಖಪಾಲ್ ಸಿಂಗ್ ಖೈರಾ ಬಂಧನ ರಾಜಕೀಯ ಸೇಡು: ಕಾಂಗ್ರೆಸ್

Prasthutha|

ದೆಹಲಿ: 2015ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರ ಬಂಧನ ‘ರಾಜಕೀಯ ಸೇಡು’ ಎಂದು ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ.

- Advertisement -


ನಾವು ಕೊನೆಯವರೆಗೂ ಹೋರಾಡುತ್ತೇವೆ ಎಂದು ಶುಕ್ರವಾರ ಹೇಳಿದ್ದಾರೆ.


ಎಎಪಿ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನಾವು ಇಂದು ಪಂಜಾಬ್ ಕಾಂಗ್ರೆಸ್ ನ ಹಿರಿಯ ನಾಯಕತ್ವದೊಂದಿಗೆ ನಮ್ಮ ಶಾಸಕ ಸುಖಪಾಲ್ ಖೈರಾ ಅವರನ್ನು ಫಜಿಲ್ಕಾದಲ್ಲಿ ಭೇಟಿಯಾಗಲು ಹೋಗಿದ್ದೆವು. ಪೊಲೀಸರು ನಮ್ಮನ್ನು ಭೇಟಿಯಾಗದಂತೆ ತಡೆದರು. ಎಎಪಿ ಪಕ್ಷದ ಈ ಸೇಡಿನ ವಿರುದ್ಧ ಕಾನೂನಾತ್ಮಕವಾಗಿ ಮತ್ತು ಬೀದಿಗಿಳಿದು ಹೋರಾಡುತ್ತೇವೆ. ಅಂತಹ ಒತ್ತಡದ ತಂತ್ರಗಳಿಗೆ ನಾವು ಹೆದರುವುದಿಲ್ಲ,ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಮಾಧ್ಯಮಗಳಿಗೆ ತಿಳಿಸಿದರು.

Join Whatsapp