ಮನು ಬಳಿಗಾರರ ಬೆಂಬಲ ಕೋರಿದ ಮಾಲಿಪಾಟೀಲ

Prasthutha|

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ ಅವರನ್ನು ಭೇಟಿ ಮಾಡಿದ ರಾಜ್ಯ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಅವರು ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು.

- Advertisement -

ಭಾನುವಾರ ಗದಗ ಜಿಲ್ಲೆಯ ಬಳಿಗಾರರ ಹುಟ್ಟೂರು ಶಿಗ್ಲಿಯ ಮನೆಯಲ್ಲಿ ಭೇಟಿ ಮಾಡಿದ ಶೇಖರಗೌಡರು, ಚುನಾವಣೆ ಪ್ರಕ್ರಿಯೆ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಶರಣು ಗೋಗೇರಿ, ಕೊಪ್ಪಳ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಅಂಗಡಿ, ಅಂದಾನಪ್ಪ ವಿಭೂತಿ, ಮಹಾಂತೇಶ ನಿಲೋಗಲ್, ನೃಪತುಂಗ ಬಳಿಗಾರ, ಮೈಕೋ ಶಿವಕುಮಾರ್ ಇದ್ದರು.

Join Whatsapp