ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರಿನಲ್ಲಿದ್ದ ಅಹಮದಾಬಾದ್ ಮೊಟೆರಾ ಕ್ರಿಕೆಟ್ ಮೈದಾನಕ್ಕೆ ನರೇಂದ್ರ ಮೋದಿಯ ಹೆಸರನ್ನು ಮರು ನಾಮಕರ ಮಾಡಿರುವುದನ್ನು ಗುಜರಾತ್‌ನ ಪ್ರಮುಖ ದಲಿತ ಮುಖಂಡ ಮತ್ತು ಶಾಸಕ ಜಿಗ್ನೇಶ್ ಮೇವಾನಿ ಅಪಹಾಸ್ಯ ಮಾಡಿದ್ದಾರೆ. ಒಂದು ದಿನ ಮೊಟೆರಾ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಎಂದು ಮರು ನಾಮಕರಣ ಮಾಡಿ ಕಂಕರಿಯಾ ಮೃಗಾಲಯವನ್ನು ‘ನರೇಂದ್ರ ಮೃಗಾಲಯ’ ಎಂದು ಹೆಸರಿಸಲಾಗುವುದು ಎಂದು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಜಿಗ್ನೇಶ್ ಮೇವಾನಿ ಈ ನಿರ್ಧಾರವನ್ನು ಲೇವಡಿ ಮಾಡಿದ್ದಾರೆ.
ಮೃಗಾಲಯದಲ್ಲಿ ಪಕ್ಷಿಗಳು, ಪ್ರಾಣಿಗಳು ಮತ್ತು ಹದ್ದುಗಳೊಂದಿಗೆ ಕ್ಷಮೆಯಾಚಿಸುತ್ತಿದ್ದೇನೆ ಎಂಬ ಬರಹದೊಂದಿಗೆ ಮೇವಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಗುಜರಾತ್ ಜನರಿಗೆ ಭರವಸೆ ನೀಡುತ್ತೇನೆ. ಒಂದು ದಿನ ನಾವು ಮೊಟೆರಾ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಹೆಸರಿಡುತ್ತೇವೆ. ಕಂಕರಿಯಾ ಮೃಗಾಲಯವನ್ನು ‘ನರೇಂದ್ರ ಮೃಗಾಲಯ’ ಎಂದೂ ಕರೆಯಲಿದ್ದೇವೆ. (ಮೃಗಾಲಯದಲ್ಲಿರುವ ಪಕ್ಷಿಗಳು ಮತ್ತು ಪ್ರಾಣಿಗಳೊಂದಿಗೆ ನಾನು ಕ್ಷಮೆಯಾಚಿಸುತ್ತೇನೆ) ಎಂದು ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.