ಸಿಪಿಐ ಯುವ ನಾಯಕ ಕನ್ನಯ್ಯ ಕುಮಾರ್ ಕಾಂಗ್ರೆಸ್ಸಿಗೆ ?

Prasthutha|

ದೆಹಲಿ: ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಹಾರದವರೆಗೆ ಬೆಂಕಿ ಚೆಂಡಿನಂತೆ ಓಡಾಡಿದ ಸಿಪಿಐ ಪಕ್ಷದ ಯುವ ಮುಂದಾಳು ಕನ್ನಯ್ಯ ಕುಮಾರ್ ಸದ್ಯವೇ ಕಾಂಗ್ರೆಸ್ಸಿಗೆ ಸೇರ್ಪಡೆ ಆಗಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

- Advertisement -


ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಇಲ್ಲಿಯವರೆಗೆ ತೀರ್ಮಾನ ತೆಗೆದುಕೊಂಡಂತಿಲ್ಲ. ಕನ್ನಯ್ಯ ಶೀಘ್ರವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ. ಇದರ ಮಧ್ಯಸ್ಥಿಕೆದಾರರಾಗಿ ಜೆಎನ್ ಯು ಹಳೆಯ ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗಿದೆ.


ಜೆಎನ್ ಯು ವಿದ್ಯಾರ್ಥಿ ನಾಯಕನಾಗಿ ಪ್ರಸಿದ್ಧಿಗೆ ಬಂದ ಕನ್ನಯ್ಯ ಕುಮಾರ್ ಭಾರತೀಯ ಕಮ್ಯೂನಿಸ್ಟ್ ಪಕ್ಷದ ವ್ಯವಹಾರಗಳ ಬಗೆಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈಗಿನ ಪ್ರಶ್ನೆ ಎಂದರೆ ಕಾಂಗ್ರೆಸ್ ಪಕ್ಷವು ಕನ್ನಯ್ಯರಿಗೆ ಸೂಕ್ತ ಸ್ಥಾನಮಾನ ನೀಡುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

Join Whatsapp