ಗೂಡ್ಸ್ ರೈಲು ಹಳಿ ತಪ್ಪಿ ನದಿಗೆ ಬಿದ್ದ ಬೋಗಿ: ಗೋದಿ ನೀರುಪಾಲು

Prasthutha|

ತಲ್ಚೇರ್: ಮಂಗಳವಾರ ಮುಂಜಾನೆ ಪೂರ್ವ ಕರಾವಳಿ ರೈಲ್ವೆಯ ಅಂಗುಲ್ –ತಲ್ಚೇರ್ ನಡುವೆ ಓಡುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಆರು ಕೋಚುಗಳು ನದಿಗೆ ಬಿದ್ದ ಘಟನೆಯು ಒಡಿಶಾದಲ್ಲಿ ನಡೆದಿದೆ.


ಈ ಆರು ಬೋಗಿಗಳಲ್ಲಿ ಗೋಧಿ ತುಂಬಿದ್ದು ಮುಂಜಾನೆ ಮೂರು ಗಂಟೆಯ ಸುಮಾರಿಗೆ ನದಿಗೆ ಪಾಲಾಗಿದೆ. ಎಂಜಿನ್ ನದಿಗೆ ಬೀಳದ್ದರಿಂದ ಡ್ರೈವರ್ ಸಹಿತ ರೈಲು ಸಿಬ್ಬಂದಿ ಬಚಾವಾಗಿದ್ದಾರೆ. ರೈಲು ಫಿರೋಜ್ ಪುರದಿಂದ ಕುರ್ದಾ ರೋಡ್ ಗೆ ಹೋಗುತ್ತಿತ್ತು. ಭಾರೀ ಮಳೆ ಮತ್ತು ಬಂಗಾಳ ಕೊಲ್ಲಿಯಲ್ಲಿ ಪ್ರಕ್ಷುಬ್ದತೆಯ ಕಾರಣ ನಂದಿರಾ ನದಿಯ ಮೇಲೆ ಈ ದುರಂತ ನಡೆದಿದೆ.

- Advertisement -


ತಲ್ಚೇರ್ ನಲ್ಲಿ 160 ಎಂಎಂ ಮಳೆ ಬಂದಿದ್ದು, ಪರಿಣಾಮ ಇಂದಿನ 12 ರೈಲುಗಳನ್ನು ರದ್ದು ಪಡಿಸಲಾಗಿದ್ದು, 8 ರೈಲುಗಳನ್ನು ಬೇರೆ ದಾರಿಗೆ ತಿರುಗಿಸಲಾಯಿತು.

- Advertisement -