ಸಿನಿಮಾ ನಟಿಯರ ಪೈಕಿ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವ ನಟಿ ನಾನು ಎಂದು ಹೇಳಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತಿಚ್ಚೆಗೆ ಕೆಲಸವಿಲ್ಲದ ಕಾರಣದಿಂದಾಗಿ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಬಾಕಿ ಇರುವ ಮೊತ್ತಕ್ಕೆ ಸರಕಾರವು ಬಡ್ಡಿ ವಿಧಿಸಿದರೆ ಆ ಕುರಿತು ಚಿಂತೆ ಮಾಡುವುದಿಲ್ಲ ಎಂದು ಹೇಳಿದರು.
ನಾನು ಅತ್ಯಧಿಕ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ಬಂದರೂ ನನ್ನ ಆದಾಯದ ಸುಮಾರು 45 ಪ್ರತಿಶತವನ್ನು ತೆರಿಗೆಯಾಗಿ ಪಾವತಿಸುತ್ತೇನೆ. ನಾನು ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ ಆಗಿದ್ದರೂ ಯಾವುದೇ ಕೆಲಸವಿಲ್ಲದ ಕಾರಣ ಜೀವನದಲ್ಲಿ ಮೊದಲ ಬಾರಿ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಇನ್ನೂ ಪಾವತಿಸಲಿಲ್ಲ” ಎಂದು ಇನ್ ಸ್ಟಾಗ್ರಾಮ್ ನಲ್ಲಿ ಕಂಗನಾ ಬರೆದುಕೊಂಡಿದ್ದಾರೆ.
“ನಾನು ವಿಳಂಬವಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಮತ್ತು ಬಾಕಿ ಇರುವ ತೆರಿಗೆ ಹಣಕ್ಕೆ ಸರಕಾರ ನನಗೆ ಬಡ್ಡಿ ವಿಧಿಸುತ್ತಿದೆ, ಆದರೂ ನಾನು ಈ ಕ್ರಮವನ್ನು ಸ್ವಾಗತಿಸುತ್ತೇನೆ” ಎಂದು ಅವರು ಹೇಳಿದರು.