ಮುಂಬೈ: ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಧಾಕಡ್ ಮೂವಿ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದ್ದು, ಪ್ರಸಕ್ತ ಸಾಲಿನ ದುರಂತ ಸಿನಿಮಾ ಎಂಬ ಕುಖ್ಯಾತಿ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಸದ್ಯ ಭಾರತದಾದ್ಯಂತ ಈ ಸಿನಿಮಾದ ಬರೀ 20 ಟಿಕೆಟ್ ಸೇಲ್ ಆಗಿದ್ದು, ಸತತ 8ನೇ ದಿನದ ಕಲೆಕ್ಷನ್ ಕಂಡು ಸಿನಿಮಾ ಜಗತ್ತು ಬೆಚ್ಚಿಬಿದ್ದಿದೆ.
ಸಿನಿಮಾ ರಿಲೀಸ್ ಆಗಿ ವಾರ ಕಳೆದಿದೆ. 8ನೇ ದಿನದಲ್ಲಿ ಧಾಕಡ್ ಮೂವೀ ಗಳಿಸಿರುವ ಆದಾಯ ಬರೀ 4420 ರೂ. ಮಾತ್ರ. ಇದರಿಂದ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.
ಧಾಕಡ್ ಹಿಂದಿ ಚಿತ್ರರಂಗದ ಅತ್ಯಂತ ದುಬಾರಿ ಮಹಿಳಾ ನಾಯಕತ್ವ ಆಧಾರಿತ ಮೂವೀ ಆಗಿದೆ. ಸದ್ಯ ಚಿತ್ರದ ನಷ್ಟದ ಲೆಕ್ಕಚಾರವನ್ನು ಅಂದಾಜು ಹಾಕಲು ಕುಳಿತರೆ ಚಿತ್ರ ನಿರ್ಮಾಪಕರಿಗೆ ಸಾರ್ವಕಾಲಿಕ ನಷ್ಟ ಎಂದು ಹೇಳಲಾಗಿದೆ. ಇದೀಗ ಹಲವು ಚಿತ್ರಮಂದಿರಗಳಲ್ಲಿ ಧಾಕಡ್ ಸಿನೆಮಾವನ್ನು ಎತ್ತಂಗಡಿ ಮಾಡಲಾಗಿದೆ.
ಪ್ರಸಕ್ತ ಈ ಸಿನಿಮಾವನ್ನು ಸುಮಾರು 80 ರಿಂದ 90 ಕೋಟಿ ಖರ್ಚಿನಲ್ಲಿ ನಿರ್ಮಾಣ ಮಾಡಲಾಗಿದೆ. ರಝ್ನೀಶ್ ಗೈ ನಿರ್ದೇಶನದ ಈ ಸಿನಿಮಾದಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ರಾಂಪಲ್, ದಿವ್ಯಾ ದತ್ತ ಮತ್ತು ಸಸ್ವತಾ ಚಟರ್ಜಿ ಧಾಕಡ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.