ಕಂಗನಾ ಟ್ವಿಟರ್ ಖಾತೆ ಅಮಾನತಿಗೆ ಹೈಕೋರ್ಟ್ ನಲ್ಲಿ ಅರ್ಜಿ | ಮಾ.9ಕ್ಕೆ ವಿಚಾರಣೆ

Prasthutha|

ಮುಂಬೈ : ಪ್ರತಿಭಟನಾ ನಿರತ ರೈತರನ್ನು ಭಯೋತ್ಪಾದಕರು ಎಂದು ಟ್ವೀಟ್ ಮಾಡಿರುವ ಬಿಜೆಪಿ ಬೆಂಬಲಿಗ ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಕೋರಿದ ಅರ್ಜಿಯ ವಿಚಾರಣೆ ಮಾ.9ರಂದು ನಡೆಸಲು ಬಾಂಬೆ ಹೈಕೋರ್ಟ್ ಒಪ್ಪಿದೆ.

- Advertisement -

ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯಲ್ಲಿ “ರೈತರು ಭಯೋತ್ಪಾದಕರು, ಭಾರತವನ್ನು ವಿಭಜಿಸುತ್ತಿದ್ದಾರೆ, ಚೀನಾದಿಂದ ಪ್ರೇರಿತರಾಗಿದ್ದಾರೆ ಎಂದು ನಟಿ ಎಗ್ಗಿಲ್ಲದೆ ಟ್ವೀಟ್ ಮಾಡಿದ್ದಾರೆ. ಈ ಕುರಿತು 2020ರ ಡಿಸೆಂಬರ್ ನಲ್ಲಿಯೇ ದೂರು ದಾಖಲಿಸಲಾಗಿದೆ. ಆದರೂ ಅವರು ರೈತರನ್ನು ಹಣಿಯುವ ತಮ್ಮ ಪ್ರವೃತ್ತಿ ನಿಲ್ಲಿಸಿಲ್ಲ. ಹೀಗಾಗಿ ಕೂಡಲೇ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಬೇಕು” ಎಂದು ಮನವಿ ಮಾಡಿದ್ದಾರೆ.

ವಕೀಲ ಕಾಶಿಫ್ ದೇಶ್ಮುಖ್ ರವರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಸ್.ಎಸ್. ಶಿಂಧೆ ಮತ್ತು ಮನೀಶ್ ಪಿತಾಲೆ ನ್ಯಾಯಪೀಠ ಆಲಿಸುತ್ತಿದ್ದು, ಮುಂದಿನ ವಾದಕ್ಕಾಗಿ ಮಾ.9ಕ್ಕೆ ಮುಂದೂಡಿದೆ.

- Advertisement -

ಕಂಗನಾ ಸಹೋದರಿ ರಂಗೋಲಿ ಚಾಂಡೇಲ್ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವ ಮತ್ತು ಸಾಮರಸ್ಯ ಕದಡುವ ಸಂದೇಶಗಳನ್ನು ಕಳುಹಿಸಿದ್ದರು. ಹೀಗಾಗಿ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಕಂಗನಾ ಖಾತೆಯನ್ನೂ ಅಮಾನತು ಮಾಡಬೇಕೆಂದು ಅವರು ಅರ್ಜಿದಾರರು ಮನವಿ ಮಾಡಿದ್ದಾರೆ.



Join Whatsapp