ರಿಷಿ ಕಪೂರ್ ಸಹೋದರ, ನಟ ರಾಜೀವ್ ಕಪೂರ್ ನಿಧನ

Prasthutha|

ನವದೆಹಲಿ : ‘ರಾಮ್ ತೇರಿ ಗಂಗಾ ಮೈಲಿ (1985)’ ಮತ್ತು ‘ಏಕ್ ಜಾನ್ ಹೇ ಹಮ್ (1983)’ ಚಿತ್ರಗಳ ಖ್ಯಾತಿಯ ರಾಜೀವ್ ಕಪೂರ್ ಇಂದು ನಿಧನರಾದರು. ರಿಷಿ ಕಪೂರ್ ಮತ್ತು ರಣಧೀರ್ ಕಪೂರ್ ಅವರ ಕಿರಿಯ ಸಹೋದರ ರಾಜೀವ್ ಕಪೂರ್ ತಮ್ಮ 58ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

- Advertisement -

ಹೃದಯಾಘಾತಕ್ಕೊಳಗಾದ ರಾಜೀವ್ ಕಪೂರ್ ಅವರನ್ನು ಚೆಂಬೂರಿನಲ್ಲಿರುವ ತಮ್ಮ ನಿವಾಸದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅದಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

ರಾಜೀವ್ ಕಪೂರ್ ಮೃತಪಟ್ಟಿರುವುದನ್ನು ಅವರ ಸಹೋದರ ರಣಧೀರ್ ಕಪೂರ್ ದೃಢಪಡಿಸಿದ್ದಾರೆ. “ನಾನು ನನ್ನ ಕಿರಿಯ ಸಹೋದರ ರಾಜೀವ್ ನನ್ನು ಕಳೆದುಕೊಂಡಿದ್ದೇನೆ. ಅವನು ಇನ್ನಿಲ್ಲ. ವೈದ್ಯರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ನಾನು ಆಸ್ಪತ್ರೆಯಲ್ಲಿದ್ದೇನೆ. ಅವನ ದೇಹಕ್ಕಾಗಿ ಕಾಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

Join Whatsapp