ಕಾಳಿ ಮಾತೆ ಪೋಸ್ಟರ್ ವಿವಾದ: ಅರ್ಜಿವಿಚಾರಣೆ ಮುಂದೂಡಿಕೆ

Prasthutha|

ನವದೆಹಲಿ: ಲೀನಾ ಮಣಿಮೇಕಲೈ ನಿರ್ಮಿಸಿರುವ ‘ಕಾಳಿ’ ಚಿತ್ರಕ್ಕೆ ಶಾಶ್ವತ ತಡೆಯಾಜ್ಞೆ ಹೇರುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಮುಂದೂಡಿದೆ.

- Advertisement -

ಅರ್ಜಿಯ ವಿಚಾರಣೆ ಶನಿವಾರದಂದು ನಿಗದಿಯಾಗಿತ್ತು. ಆದರೆ ನ್ಯಾಯಾಧೀಶರು ರಜೆಯಲ್ಲಿ ಇರುವುದರಿಂದ ವಿಚಾರಣೆಯನ್ನು  ಆಗಸ್ಟ್ 29ಕ್ಕೆ ಮುಂದೂಡಲಾಗಿದೆ.

ಹಿಂದೂ ದೇವತೆಯಾಗಿರುವ ಕಾಳಿ ಮಾತೆಯನ್ನು ಚಿತ್ರದ ಪೋಸ್ಟರ್ ನಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ವಕೀಲ ರಾಜ್ ಗೌರವ್ ದೂರು ದಾಖಲಿಸಿದ್ದರು.

- Advertisement -

ಲೀನಾ ‘ಕಾಳಿ’ ಎಂಬ ಸಾಕ್ಷ್ಯಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ.ಈ ಕುರಿತು ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Join Whatsapp