ಜಪಾನ್ ಏರ್ಲೈನ್ಸ್ ನಿಂದ ಬೆಂಗಳೂರು – ಟೋಕಿಯೊ ನಡುವೆ ಏಕೈಕ ತಡೆರಹಿತ ವಿಮಾನ ಸೇವೆ ಹೆಚ್ಚಳ

Prasthutha|

ಬೆಂಗಳೂರು: ಪ್ರಸ್ತುತ ಬೆಂಗಳೂರು ಮತ್ತು ಟೋಕಿಯೊ ನಡುವೆ ತಡೆರಹಿತ ವಿಮಾನ ಸೇವೆಯನ್ನು ಜಪಾನ್ ಏರ್ಲೈನ್ಸ್(ಜೆಎಎಲ್)ನಿರ್ವಹಿಸುತ್ತಿದೆ. ಜೆಎಎಲ್ ಈಗ ಆಗಸ್ಟ್ 6ರಿಂದ ವಾರಕ್ಕೆ ಎರಡು ಬಾರಿಯಿಂದ ಮೂರು ಬಾರಿ ವಿಮಾನಗಳ ಆವರ್ತನ ಹೆಚ್ಚಿಸಿದೆ. ಈ ಹೆಚ್ಚುವರಿ ವಿಮಾನವು ಜಪಾನ್ನಿಂದ ಮತ್ತು ಅಲ್ಲಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಗಳಿಗೆ ಹಾಗೂ ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತೊಂದು ಅನುಕೂಲಕರ ಆಯ್ಕೆಯಾಗಿದೆ.

- Advertisement -

2020ರಲ್ಲಿ ತನ್ನ ಪ್ರಾರಂಭಿಕ ಅಭಿಯಾನ `ಕ್ಲೌಡ್ ಸರ್ವೀಸ್ ದಟ್ ಟೆಕೀಸ್ ಆರ್ ಲುಕಿಂಗ್ ಫಾರ್ವರ್ಡ್ಟು(ಟೆಕಿಗಳು ನಿರೀಕ್ಷಿಸುವ ಕ್ಲೌಡ್ ಸೇವೆ’ ಎಂದಿರುವ ಜೆಎಎಲ್ ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಗಳೂರು ಮತ್ತು ಜಪಾನ್(ನರಿಟಾ) ನಡುವೆ ಮೊದಲ ಮತ್ತು ಏಕೈಕ ನೇರ ವಿಮಾನವನ್ನು ಉದ್ಘಾಟಿಸಿತು.

ಕೋವಿಡ್-19 ಸಾಂಕ್ರಾಮಿಕದಿಂದ ಈ ವಿಮಾನಯಾನ ಸಂಸ್ಥೆಯು ಅಗತ್ಯವಿದ್ದಾಗ ಮಾತ್ರ ವಿಶೇಷ ವಿಮಾನಗಳ ಹಾರಾಟ ನಡೆಸಿತು. ಭಾರತ ಸರ್ಕಾರದ ಏರ್ ಬಬಲ್ ಅರೇಂಜ್ ಮೆಂಟ್ ಅಡಿಯಲ್ಲಿ ಜೆಎಎಲ್ ಮಾರ್ಚ್ 2021ರಿಂದ ವಾರಕ್ಕೆಒಂದು ನಿಯಮಿತ ವಿಮಾನಗಳ ಕಾರ್ಯಾಚರಣೆ ನಡೆಸಿತು. ವಿಶ್ವದಾದ್ಯಂತ ಸಾಂಕ್ರಾಮಿಕದಿಂದ ಕ್ರಮೇಣ ಚೇತರಿಸಿಕೊಂಡ ನಂತರ ಜೆಎಎಲ್ ತನ್ನ ವಿಮಾನಗಳ ಆವರ್ತನ ಹೆಚ್ಚಿಸಿತು. ಈ ವಿಮಾನಯಾನ ಸಂಸ್ಥೆಯ ಹೊಸ ವಿಮಾನದ ವೇಳಾಪಟ್ಟಿಯಂತೆ ವಾರಕ್ಕೆ ಮೂರು ರೌಂಡ್ ಟ್ರಿಪ್ ವಿಮಾನಗಳು ಸಂಚರಿಸುತ್ತವೆ. ಜೆಎಎಲ್ ದಿನಕ್ಕೆ ಒಂದು ವಿಮಾನ ಕಾರ್ಯಾಚರಣೆ ಮಾಡುವ ಮೂಲ ಯೋಜನೆಯತ್ತ ಶ್ರಮಿಸುತ್ತಿದೆ.

- Advertisement -

ಬೆಂಗಳೂರಿನಿಂದ ಟೋಕಿಯೊ (ನರಿಟಾ)ಗೆ ನೇರ ವಿಮಾನಗಳ ಹಾರಾಟ ಮರು ಪ್ರಾರಂಭವನ್ನು ಸಂಭ್ರಮಿಸಲು ಜೆಎಎಲ್ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಬಿಐಎಎಲ್) ಜೆಎಲ್ 754 ವಿಮಾನದ ಚೆಕ್-ಇನ್ ಕೌಂಟರ್ ನಲ್ಲಿ ದೀಪ ಬೆಳಗುವ ಮತ್ತು ಆಗಸ್ಟ್ 5, 2022ರಂದು ರಾತ್ರಿ ನಿರ್ಗಮನದ ಮುನ್ನ ಹೆಬ್ಬಾಗಿಲು ತೆರೆಯುವ ಸಂಭ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಹಾಗೂ ಮಧ್ಯಮ ಹಂತದ ಕೈಗಾರಿಕೆಗಳ ಸಚಿವ ಡಾ.ಮುರುಗೇಶ್ ಆರ್.ನಿರಾಣಿ ಮತ್ತು ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣಾ, ಐಎಎಸ್ ಉಪಸ್ಥಿತರಿದ್ದರು. ಅವರಿಬ್ಬರೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಜಪಾನ್ಗೆ ಜೆಎಲ್ 754ನಲ್ಲಿ ಸಂಚರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಪಾನ್ಏರ್ ಲೈನ್ಸ್ ನ ಉಪಾಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಶಿನ್ಯಾ ನರುಸೆ, “ಬೆಂಗಳೂರಿನಲ್ಲಿ ಹೆಚ್ಚು ಅನುಕೂಲಕರ ವಿಮಾನಗಳ ಮೂಲಕ ಬೆಂಗಳೂರಿನಲ್ಲಿ ಸಮುದಾಯಕ್ಕೆಉತ್ತಮ ರೀತಿಯಲ್ಲಿ ಸೇವೆ ಒದಗಿಸಲು ಪ್ರಗತಿಗೆ ನಾವು ಬಹಳ ಉತ್ಸುಕರಾಗಿದ್ದೇವೆ ಮತ್ತು ಆದ್ದರಿಂದಉತ್ತರ ಅಮೆರಿಕಾಗೆ ಸಂಪರ್ಕಿಸಲು ಹೆಚ್ಚಿನ ಆಯ್ಕೆಗಳನ್ನು ಕೂಡಾ ಒದಗಿಸುತ್ತಿದ್ದೇವೆ. ಭಾರತ ಮತ್ತು ಜಪಾನ್ ನಡುವೆ ಸಂಚರಿಸುವ ನಮ್ಮ ಅತಿಥಿಗಳಿಗೆ ಅತ್ಯುತ್ತಮ ಸುರಕ್ಷತೆ ಮತ್ತು ಸೌಖ್ಯ ಒದಗಿಸಲು ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ ಮತ್ತು ಹಾಗೆ ಮಾಡುವಲ್ಲಿಎರಡೂ ದೇಶಗಳ ನಡುವಿನ ಸಾಮಾಜಿಕ ಮತ್ತುಆರ್ಥಿಕ ಮೌಲ್ಯಗಳಿಗೆ ಕೊಡುಗೆ ನೀಡುತ್ತೇವೆ” ಎಂದರು.

“ಬಿಐಎಎಲ್ ನಲ್ಲಿ ನಮ್ಮ ಪ್ರಮುಖ ಕಾರ್ಯತಂತ್ರೀಯ ಆದ್ಯತೆಗಳಲ್ಲಿ ಒಂದು ನಮ್ಮ ಪ್ರಯಾಣಿಕರ ಪ್ರಮಾಣ ಹೆಚ್ಚಾದಂತೆ ಪ್ರಮುಖ ಅಂತಾರಾಷ್ಟ್ರೀಯ ತಾಣಗಳಿಗೆ ತಡೆರಹಿತ ಕನೆಕ್ಟಿವಿಟಿ ಹೆಚ್ಚಿಸುವುದಾಗಿದೆ. ಜಪಾನ್ ಭಾರತದಿಂದ ವಾಣಿಜ್ಯ ಹಾಗೂ ವಿರಾಮದ ಪ್ರಯಾಣಿಕರಿಂದ ನೇರ ವಿಮಾನಗಳಿಗೆ ಅಪಾರ ಮಾರುಕಟ್ಟೆ ಸಾಮರ್ಥ್ಯ ಹೊಂದಿದೆ. ದಕ್ಷಿಣ ಭಾರತದಿಂದ ಜಪಾನ್ ಗೆ ನೇರ ಸಂಪರ್ಕವಿರುವ ಏಕೈಕ ವಿಮಾನ ನಿಲ್ದಾಣ ನಮ್ಮದಾಗಿದೆ. ಆದ್ದರಿಂದ ಜಪಾನ್ ಏರ್ಲೈನ್ಸ್ ನಿಂದ ಟೋಕಿಯೊ ನರಿಟಾ ವಿಮಾನ ನಿಲ್ದಾಣಕ್ಕೆ ಮೂರನೇ ವಾರದ ವಿಮಾನ ಸೇರ್ಪಡಿಕೆ ಮಾಡಲು ಉತ್ಸುಕರಾಗಿದ್ದೇವೆ, ಇದು ಭಾರತ ಮತ್ತು ಜಪಾನ್ ನಡುವೆ ಹಾಗೂ ಜಪಾನ್ ಆಚೆಗೂ ಜನರು ಸಂಚರಿಸಲು ಮತ್ತಷ್ಟು ಅನುಕೂಲ ಕಲ್ಪಿಸುತ್ತದೆ” ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ನ ಚೀಫ್ ಸ್ಟಾಟಜಿ ಅಂಡ್ ಡೆವಲಪ್ಮೆಂಟ್ ಆಫೀಸರ್ ಸಾತ್ಯಕಿರಘುನಾಥ್ ಹೇಳಿದರು.

Join Whatsapp