ಕಲಾಯಿ: ಎಸ್ ಡಿಪಿಐನಿಂದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಲಾಯಿ ಬೂತ್ ಸಮಿತಿ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ದ್ವಜಾರೋಹಣಾ ಕಾರ್ಯಕ್ರಮ’ ಏರ್ಪಡಿಸಲಾಗಿತ್ತು.

- Advertisement -

ಎಸ್ ಡಿಪಿಐ ಕಲಾಯಿ ಬೂತ್ ಸಮಿತಿ ಅಧ್ಯಕ್ಷ ಯಾಕೂಬ್ ಕಲಾಯಿ ಧ್ವಜಾರೋಹಣ ನೆರವೇರಿಸಿದರು.

ಪ್ರಾಸ್ತಾವಿಕವಾಗಿ ಅಮ್ಮುಂಜೆ ಕರಿಯಂಗಳ ಗ್ರಾಮ ಸಮಿತಿ ಸದಸ್ಯ ನೌಶದ್ ಕಲಾಯಿ ಮಾತನಾಡಿ, ಸ್ವಾತಂತ್ರ್ಯೋತ್ಸವ ಬರೀ ಸಂಭ್ರಮ ಆಗದಿರಲಿ. ಮಹನೀಯರ ತ್ಯಾಗ ಪರಿಶ್ರಮದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ. ಪುರುಷರಷ್ಟೇ ಪರಿಣಾಮಕಾರಿಯಾಗಿ ಅಸಂಖ್ಯಾತ ಮಹಿಳೆಯರೂ ದೇಶ ವಿಮೋಚನೆಗಾಗಿ ಜೀವ ತೆತ್ತಿದ್ದಾರೆ ಎಂಬುವುದನ್ನು ನಾವು ಮರೆತು ಬಿಡುತ್ತೇವೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ವೀರಮರಣವನ್ನಪ್ಪಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಹೊಣೆ ಪ್ರಜ್ಞಾವಂತ ಮತ್ತು ಪ್ರಜಾಪ್ರಭುತ್ವವಾದಿ ನಾಗರಿಕರ ಮೇಲಿದೆ ಎಂದು ಹೇಳಿದರು.

- Advertisement -

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸದಸ್ಯ ಅನ್ವರ್ ಬಡಕಬೈಲು ಮಾತನಾಡಿದರು.

ವೇದಿಕೆಯಲ್ಲಿ ಕಲಾಯಿ ಮದೀನಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಮೊನಾಕ ಅಮ್ಮುಂಜೆ, ಕರಿಯಂಗಳ ಗ್ರಾಮ ಸಮಿತಿ ಉಪಾಧ್ಯಕ್ಷ ಉಸ್ಮಾನ್, HIWEC ಕಲಾಯಿ ಅಧ್ಯಕ್ಷ ಶರೀಫ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಸಫ್ವಾನ್ TH, GCC ಗಲ್ಫ್ ಕಮಿಟಿ ಇದರ ಸದಸ್ಯ ಅಸ್ಬಾಕ್ ಹಾಗೂ ಅದ್ದುವಾಕ ಉಪಸ್ಥಿತರಿದ್ದರು. SDPI ಕಲಾಯಿ ಬೂತ್ ಸಮಿತಿ ಕಾರ್ಯದರ್ಶಿ ನವಾಝ್  ಕಲಾಯಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Join Whatsapp