ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಮನೆಗೆ ಭೇಟಿ ನೀಡಿದ ಕಲಬುರಗಿ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್

Prasthutha|

ಅತಿ ಗಂಭೀರವಾದ ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌.ಡಿ ಪಾಟೀಲ್ ಮನೆಗೆ ಕಲಬುರಗಿ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ ನೀಡಿದ್ದಾರೆ. ಆರ್‌.ಡಿ ಪಾಟೀಲ್ ಮನೆಯಲ್ಲಿ ಊಟೋಪಚಾರವನ್ನೂ ಮಾಡಿದ್ದಾರೆ.

- Advertisement -

ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣದಿಂದಾಗಿ 58,000ಕ್ಕೂ ಹೆಚ್ಚು ಯುವಜನರ ಪೊಲೀಸ್‌ ಆಗುವ ಕನಸು ಕಮರಿ ಹೋಗಿದೆ. ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ಆದ ಆರ್‌.ಡಿ ಪಾಟೀಲ್ ಜೈಲು ಸೇರಿದ್ದಾರೆ. ಆತನ ಮನೆಗೆ ಹೋಗಿ ಉಮೇಶ್ ಜಾಧವ್ ಭೇಟಿ ನೀಡಿ ಉಂಡು ಬಂದಿದ್ದಾರೆ.

ಉಮೇಶ್ ಜಾಧವ್ ಭೇಟಿಯ ಜನರಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ಬಿಜೆಪಿಗೆ ತಿರುಗು ಬಾಣವಾಗಿ ಪರಿಣಮಿಸುವ ಸಾಧ್ಯತೆ ಸೃಷ್ಟಿಯಾಗಿದೆ. ಈ ಭೇಟಿಯನ್ನು ಸಮರ್ಥಸಿಕೊಳ್ಳುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ಕಷ್ಟಕರವಾಗಿದೆ. ಗಂಭೀರ ಪ್ರಕರಣದ ಆರೋಪಿ ಮನೆಗೆ ಭೇಟಿ ನೀಡಿರುವ ಜಾಧವ್ ಇದನ್ನು ಹೇಗೆ ಸಮರ್ಥಿಸುತ್ತಾರೋ ಗೊತ್ತಿಲ್ಲ.



Join Whatsapp